ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರಿ ಟೆಲಿಕಾಂ ಕಂಪನಿಗಳಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಮತ್ತು ಮಹಾನಗರ ಸಂಚಾರ್ ನಿಗಮ್ ಲಿಮಿಟೆಡ್ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರವು ತನ್ನ ಎಲ್ಲಾ ಸಚಿವಾಲಯಗಳು, ಸಾರ್ವಜನಿಕ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಿಗೆ ಈ ಎರಡು ಟೆಲಿಕಾಂ ಕಂಪನಿಗಳ ಸೇವೆಗಳನ್ನು ಕಡ್ಡಾಯಗೊಳಿಸಿದೆ.
ದೂರಸಂಪರ್ಕ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸೇವೆಗಳನ್ನು ಅದರ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಸಿಪಿಎಸ್ಇಗಳು, ಕೇಂದ್ರ ಸ್ವಾಯತ್ತ ಸಂಸ್ಥೆಗಳು ಕಡ್ಡಾಯವಾಗಿ ಬಳಸಲು ಭಾರತ ಸರ್ಕಾರ ಅನುಮೋದಿಸಿದೆ. ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ನ ಟೆಲಿಕಾಂ ಸೇವೆಗಳ ಬಳಕೆಯನ್ನು ಕಡ್ಡಾಯಗೊಳಿಸಲು ಸಂಪುಟ ನಿರ್ಧರಿಸಿತ್ತು. ಇಂಟರ್ನೆಟ್, ಬ್ರಾಡ್ಬ್ಯಾಂಡ್, ಲ್ಯಾಂಡ್ಲೈನ್ ಅವಶ್ಯಕತೆಗಳಿಗಾಗಿ ಬಿಎಸ್ಎನ್ಎಲ್ ಅಥವಾ ಎಂಟಿಎನ್ಎಲ್ ನೆಟ್ವರ್ಕ್ ಕಡ್ಡಾಯವಾಗಿ ಬಳಸುವಂತೆ ದೂರಸಂಪರ್ಕ ಇಲಾಖೆ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಸಿಪಿಎಸ್ಇಗಳು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳನ್ನು ಕೇಳಿದೆ.
2019-20ರಲ್ಲಿ ಬಿಎಸ್ಎನ್ಎಲ್ಗೆ 15,500 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಎಂಟಿಎನ್ಎಲ್ಗೆ 3,694 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.