ಕೊರೊನಾ ಮಹಾಮಾರಿ ಆರ್ಭಟ ಇನ್ನೂ ನಿಂತಿಲ್ಲ. ಇದರ ಮಧ್ಯೆಯೇ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. ಅನ್‌ಲಾಕ್ 5.0ನಲ್ಲಿ ಥಿಯೇಟರ್‌ಗಳನ್ನು ತೆರೆಯೋದಿಕ್ಕೂ ಹಾಗೂ ಚಿತ್ರ ಪ್ರದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿದೆ. ಒಂದಿಷ್ಟು ಮುನ್ನೆಚ್ಚರಿಕಾ ಕ್ರಮ ಅನುಸರಿಸುವ ಮೂಲಕ ಚಿತ್ರ ಪ್ರದರ್ಶನ ಮಾಡಬಹುದು ಎಂದು ಹೇಳಲಾಗಿದೆ. ಆದರೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೂ ಒಂದಿಷ್ಟು ಥಿಯೇಟರ್‌ಗಳು ತೆರೆಯೋದು ಡೌಟ್ ಎನ್ನಲಾಗುತ್ತಿದೆ.
ಹೌದು ನಾಳೆಯಿಂದ ಥಿಯೇಟರ್ ಹಾಗು ಮಲ್ಟಿ ಫ್ಲೆಕ್ಸ್‌ಗಳು ತೆರೆಯೋದಿಕ್ಕೆ ಅವಕಾಶ ನೀಡಲಾಗಿದೆ. ಆದರೆ ಒಂದಿಷ್ಟು ಥಿಯೇಟರ್‌ಗಳ ಮಾಲೀಕರು ಥಿಯೇಟರ್‌ಗಳನ್ನು ತೆರೆಯೋದಿಕ್ಕೆ ಮನಸ್ಸು ಮಾಡಿಲ್ಲ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಅರ್ಧದಷ್ಟು ಥಿಯೇಟರ್‌ಗಳು ತೆರೆಯೋದು ಡೌಟ್ ಎನ್ನಲಾಗಿದೆ. ತೆರೆಯುತ್ತಿರುವ ಥಿಯೇಟರ್‌ಗಳಲ್ಲಿ ಈಗಾಗಲೇ ಸ್ವಚ್ಛತಾ ಕಾರ್ಯ ಮಾಡಲಾಗಿದೆ.
ಯುಎಫ್‌ಓ, ಕ್ಯೂಬ್‌ನವರು ಕೆಲ ಸಿಂಗಲ್ ಥಿಯೇಟರ್ ಮಾಲೀಕರನ್ನು ಸಂಪರ್ಕ ಮಾಡಿಲ್ಲವಂತೆ. ಹೀಗಾಗಿ ಎಲ್ಲಾ ಥಿಯೇಟರ್ ಮಾಲೀಕರಲ್ಲಿ ಒಮ್ಮತ ಮೂಡಿಲ್ಲದೇ ಇರುವುದರಿಂದ ತೆರೆಯೋ ಸಾಧ್ಯತೆ ಕಡಿಮೆ ಇದೆ. ಇನ್ನು ನಾಳೆ ಥಿಯೇಟರ್ ತೆರೆದರೂ ಚಿತ್ರ ಪ್ರದರ್ಶನ ಶುಕ್ರವಾರದಿಂದ ಇರಲಿದೆ. ಚಿರು ಸರ್ಜಾ ನಾಯಕನಾಗಿ ನಟಿಸಿದ್ದ ಶಿವಾರ್ಜುನ ಸಿನಿಮಾ ಇದೇ 16ರ ಶುಕ್ರವಾರದಿಂದ ರಿಲೀಸ್ ಆಗಲಿದೆ. ಒಟ್ಟು 150 ಥಿಯೇಟರ್‌ನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ಸುಮಾರು 60 ಥಿಯೇಟರ್‌ನಲ್ಲಿ ಮಾತ್ರ ತೆರೆ ಕಾಣಲಿದೆ.