ಅಕ್ಟೋಬರ್ 16 ರಂದು ಆಹಾರ ಹಾಗೂ ಕೃಷಿ ಸಂಸ್ಥೆಯ 75ನೇ ವರ್ಷದ ವಾರ್ಷಿಕೋತ್ಸವದ ಸ್ಮರಣಾರ್ಥ ಪ್ರಧಾನಿ ಮೋದಿ 75 ರೂಪಾಯಿ ಮೌಲ್ಯದ ನಾಣ್ಯವನ್ನ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಭಾರತ ಹಾಗೂ ಎಫ್ಎಓ ನಡುವಿನ ಸಂಬಂಧವನ್ನ ಮತ್ತಷ್ಟು ಬಲಗೊಳಿಸಲು ಮುಂದಾಗಿದ್ದಾರೆ.
ಇನ್ನು ಇದರ ಜೊತೆಯಲ್ಲಿ 8 ಬಗೆಯ ಬೆಳೆಗಳನ್ನೂ ರಾಷ್ಟ್ರಕ್ಕೆ ಅರ್ಪಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ನೀಡಿರುವ ಆದ್ಯತೆಯನ್ನ ಜಗತ್ತಿಗೇ ಸಾರಲಿದ್ದಾರೆ ಅಂತಾ ಪ್ರಧಾನಿ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಈ ಒಂದು ಮಹತ್ವಪೂರ್ಣ ಕಾರ್ಯಕ್ಕೆ ದೇಶದ ಅಂಗನವಾಡಿಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸಾವಯವ ಹಾಗೂ ತೋಟಗಾರಿಕಾ ಇಲಾಖೆಗಳು ಸಾಕ್ಷಿಯಾಗಲಿವೆ. ಇನ್ನುಳಿದಂತೆ ಕೇಂದ್ರದ ಕೃಷಿ ಸಚಿವರು, ಹಣಕಾಸು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತರಾಗಲಿದ್ದಾರೆ.
ಜನಸಾಮಾನ್ಯರನ್ನ ಆರ್ಥಿಕತೆ ಹಾಗೂ ಪೌಷ್ಠಿಕತೆ ಹೆಚ್ಚಿಸುವಲ್ಲಿ ಎಫ್ಎಒನ ಪಾತ್ರ ಪ್ರಮುಖವಾದದ್ದು. ಭಾರತ ಎಫ್ಎಒ ಜೊತೆ ಐತಿಹಾಸಿಕ ಒಡನಾಟವನ್ನ ಹೊಂದಿದೆ.