alex Certify ಏರೋಸ್ಪೇಸ್​ ಇಂಜಿನಿಯರಿಂಗ್​ ಕಲಿಯುವ ಮೂಲಕ ದಾಖಲೆ ಬರೆದಿದ್ದಾನೆ 12 ರ ಈ ಪೋರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರೋಸ್ಪೇಸ್​ ಇಂಜಿನಿಯರಿಂಗ್​ ಕಲಿಯುವ ಮೂಲಕ ದಾಖಲೆ ಬರೆದಿದ್ದಾನೆ 12 ರ ಈ ಪೋರ..!

ಎರೋಸ್ಪೇಸ್​ ಇಂಜಿನಿಯರಿಂಗ್​ ವ್ಯಾಸಂಗ ಮಾಡೋದು ಅಂದ್ರೆ ಸುಲಭವೇನಲ್ಲ. 18ರಿಂದ 25 ವರ್ಷ ವಯಸ್ಸಿನವರು ಈ ಕೋರ್ಸ್​ನ ಕಲಿಯೋಕೆ ಸಮರ್ಥರು ಎನ್ನುತ್ತೆ ನಮ್ಮ ಎಜ್ಯುಕೇಷನ್​ ಸಿಸ್ಟಮ್. ಆದರೆ 12 ವರ್ಷದ ಬಾಲಕನೊಬ್ಬ ಏರೋಸ್ಪೇಸ್​ ಇಂಜಿನಿಯರಿಂಗ್​ ಕಲೀತಾ ಇದಾನೆ ಅಂದ್ರೆ ನೀವು ನಂಬಲೇ ಬೇಕು.

12 ವರ್ಷದ ಮಕ್ಕಳು ಏಳನೇ ತರಗತಿ ವ್ಯಾಸಂಗ ಮಾಡೋದು ಕಾಮನ್​. ಆದರೆ ಅಮೆರಿಕದ ಕ್ಯಾಲೇಬ್​ ಆಂಡರ್ಸನ್​ ಎಂಬ ಹೆಸರಿನ 12ರ ಪೋರ ಏರೋಸ್ಪೇಸ್​ ಇಂಜಿನಿಯರಿಂಗ್​ ವ್ಯಾಸಂಗ ಮಾಡ್ತಿದ್ದಾನೆ.

ಉತ್ತಮ ಕಲಿಕಾ ಸಾಮರ್ಥ್ಯ ಹೊಂದಿರೋ ಈತ ಜಾರ್ಜಿಯಾ ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್​ ಎಂಜಿನಿಯರಿಂಗ್​ ವಿದ್ಯಾರ್ಥಿಯಾಗಿದ್ದಾನೆ. ಕೇವಲ 9 ತಿಂಗಳ ಮಗುವಿದ್ದಾಗ ಕ್ಯಾಲೇಬ್​ ಗಣಿತದ ಕಷ್ಟದ ಲೆಕ್ಕಗಳನ್ನ ಬಿಡಿಸುತ್ತಿದ್ದನಂತೆ.

ಕಾಲೇಜಿನ ಅನುಭವ ಹೇಗಿದೆ ಅಂತಾ ಈ ಪುಟ್ಟ ಪೋರನನ್ನ ಕೇಳಿದ್ರೆ…..ನನ್ನ ಸಹಪಾಠಿಗಳೆಲ್ಲ ನನಗಿಂತ ಎತ್ತರ ಇದ್ದಾರೆ. ನನಗೆ ನೆನಪಿನ ಶಕ್ತಿ ಜಾಸ್ತಿ ಇರೋದ್ರಿಂದ ಇದೆಲ್ಲ ಸಾಧ್ಯವಾಯ್ತು ಅಂತಾ ಹೇಳ್ತಾನೆ.

ಇತ್ತ ಜಾರ್ಜಿಯಾ ವಿಶ್ವವಿದ್ಯಾಲಯ ಕೂಡ ಈತನ ಕಲಿಕಾ ಸಾಮರ್ಥ್ಯವನ್ನ ಗುರುತಿಸಿದೆ. ಆಂಡರ್ಸನ್​ ಪುಟ್ಟ ಹುಡುಗ ಎಂದು ಕಡೆಗಣನೆ ಮಾಡದೇ, ಈತನಿಗೆ ಉಳಿದ ವಿದ್ಯಾರ್ಥಿಗಳ ರೀತಿಯಲ್ಲೇ ಶಿಕ್ಷಣವನ್ನ ನೀಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...