ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನವೂ ನಿರಂತರವಾಗಿ ನಡೆಯುತ್ತಿದೆ. ಆದ್ರೆ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ತಪ್ಪು ನಂಬಿಕೆಗಳಿವೆ.
ಕೊರೊನಾ ವೈರಸ್ ಮಾನವ ನಿರ್ಮಿತ ವೈರಸ್ ಎಂದು ಈಗ್ಲೂ ಜನ ನಂಬುತ್ತಿದ್ದಾರೆ. ಆರಂಭದಲ್ಲಿ ಚೀನಾ ವೈರಸ್ ಸೃಷ್ಟಿಸಿದೆ ಎನ್ನಲಾಗ್ತಿತ್ತು. ಆದ್ರೆ ಚೀನಾ ಯಾವುದೇ ವೈರಸ್ ಸೃಷ್ಟಿ ಮಾಡಿಲ್ಲ. ಅಮೆರಿಕನ್ ಇಂಟೆಲಿಜೆನ್ಸ್ ಇದು ಮಾನವ ನಿರ್ಮಿತವಲ್ಲ ಎಂದಿದೆ.
ಕೊರೊನಾ ಸಾಮಾನ್ಯ ಜ್ವರಕ್ಕಿಂತ ಹೆಚ್ಚು ಅಪಾಯಕಾರಿಯಲ್ಲ ಎಂಬ ನಂಬಿಕೆಯೂ ಇದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅನೇಕರು ಕೊರೊನಾ ಸಾಮಾನ್ಯ ಜ್ವರಕ್ಕಿಂತ ಹೆಚ್ಚು ಅಪಾಯಕಾರಿಯಲ್ಲ ಎಂದಿದ್ದರು. ಇದನ್ನೇ ಜನ ನಂಬುತ್ತಿದ್ದಾರೆ. ಸುಳ್ಳನ್ನು ಪದೇ ಪದೇ ಹೇಳಿದ್ರೆ ಅದು ಸತ್ಯವಾದಂತೆ ಈ ಮಾತನ್ನು ಜನರು ನಂಬುತ್ತಿದ್ದಾರೆ. ಆದ್ರೆ ಕೊರೊನಾ ಹೆಚ್ಚು ಅಪಾಯಕಾರಿ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.
ಮಾಸ್ಕ್ ಬಗ್ಗೆಯೂ ಜನರಿಗೆ ಸರಿಯಾದ ಅಭಿಪ್ರಾಯವಿಲ್ಲ.ಮಾಸ್ಕ್ ಕೊರೊನಾ ಕೊಲ್ಲಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬರುತ್ತದೆ. ಆದ್ರೆ 170 ಅಧ್ಯಯನದಲ್ಲಿ ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯ ಎನ್ನಲಾಗಿದೆ. ಆರಂಭದಲ್ಲಿ ಮಾಸ್ಕ್ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿರಲಿಲ್ಲ. ಹಾಗಾಗಿ ಜನರು ಮಾಸ್ಕ್ ಕೊರೊನಾ ಕೊಲ್ಲಲು ಸಾಧ್ಯವಿಲ್ಲವೆಂದೇ ನಂಬುತ್ತಿದ್ದಾರೆ.
ರೋಗ ನಿರೋಧಕ ಶಕ್ತಿ ಹೆಚ್ಚಿರುವವರಲ್ಲಿ ವೈರಸ್ ಹರಡುವುದಿಲ್ಲ ಎನ್ನಲಾಗಿತ್ತು. ಇದೇ ಕಾರಣಕ್ಕೆ ಕೆಲವು ಕಡೆ ಲಾಕ್ ಡೌನ್ ಜಾರಿಗೆ ಬಂದಿರಲಿಲ್ಲ. ಆದ್ರೆ ಇದು ಕೂಡ ತಪ್ಪು ಕಲ್ಪನೆ. ರೋಗ ನಿರೋಧಕ ಶಕ್ತಿ ಹೆಚ್ಚಿರುವವರಲ್ಲೂ ಕೊರೊನಾ ಸೋಂಕು ಹರಡಿದೆ. ಆದ್ರೆ ಹೊರ ಜಗತ್ತಿಗೆ ತೆರೆದುಕೊಳ್ಳಲು ಜನರು ಆತುರರಾಗಿರುವ ಕಾರಣ ಅವರು ಇದನ್ನು ಒಪ್ಪಿಕೊಳ್ತಿಲ್ಲ.