ವಕೀಲ ಪ್ರಶಾಂತ್ ಭೂಷಣ್ ವಾಕ್ ಸ್ವಾತಂತ್ರ್ಯ ದುರುಪಯೋಗ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ಮಾತನಾಡಿದ ಅಟರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮಾಧ್ಯಮಗಳು, ವಾಕ್ ಸ್ವಾತಂತ್ರ್ಯ ಹಾಗೂ ನ್ಯಾಯಾಲಯಗಳನ್ನ ಅವಮಾನ ಮಾಡುವ ಹೇಳಿಕೆಗಳ ನಡುವಿನ ವ್ಯತ್ಯಾಸವನ್ನು ಅರಿಯಬೇಕಿದೆ ಅಂತಾ ಹೇಳಿದ್ರು.
2009ರಲ್ಲಿ ಖಾಸಗಿ ಪತ್ರಿಕೆಗೆ ಸಂದರ್ಶನ ನೀಡಿದ್ದ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ನ ಅಂದಿನ 16 ನ್ಯಾಯಮೂರ್ತಿಗಳಲ್ಲಿ ಅರ್ಧದಷ್ಟು ಮಂದಿ ಭ್ರಷ್ಟರು ಅಂತಾ ಆರೋಪಿಸಿದ್ದರು.
ಈ ವಿಚಾರವಾಗಿ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ನೇತೃತ್ವದ ಪೀಠದ ಎದುರು ಮಾತನಾಡಿದ ಅವ್ರು ವಾಕ್ ಸ್ವಾತಂತ್ರ್ಯ ಇದೀಗ ಬೇರೆಯ ದಿಕ್ಕಿನಲ್ಲೇ ಸಾಗುತ್ತಿದೆ ಅಂತಾ ಹೇಳಿದ್ರು.
ಇದೇ ವೇಳೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನೂ ಉಲ್ಲೇಖಿಸಿದ ಅಟರ್ನಿ ಜನರಲ್ ಕೋರ್ಟ್ನಲ್ಲಿ ಪ್ರಕರಣ ಸಂಬಂಧದ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇತ್ತ ಖಾಸಗಿ ಮಾಧ್ಯಮಗಳು ಆರೋಪಿಗಳ ಖಾಸಗಿ ಚಾಟ್ಗಳನ್ನ ಪ್ರಸಾರ ಮಾಡ್ತಿವೆ. ಈ ರೀತಿ ಖಾಸಗಿ ಚಾಟ್ಗಳನ್ನ ಟಿವಿ ಚಾನೆಲ್ಗಳಲ್ಲಿ ಪ್ರಸಾರ ಮಾಡೋದು ಅಪಾಯಕಾರಿ ಅಂತಾ ಅಭಿಪ್ರಾಯಪಟ್ಟರು