ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಿಲುಗಡೆಯಾಗಿದ್ದ ರೈಲು ಸಂಚಾರ ಹಂತಹಂತವಾಗಿ ಆರಂಭವಾಗತೊಡಗಿದೆ.
ಅಕ್ಟೋಬರ್ 20 ರಿಂದ ನವೆಂಬರ್ 30 ರವರೆಗೆ 392 ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ತೀರ್ಮಾನಿಸಿದೆ. ದೇಶಾದ್ಯಂತ ಹಬ್ಬದ ಸೀಸನ್ ಸಮೀಪಿಸುತ್ತಿರುವಂತೆಯೇ ವಿಶೇಷ ರೈಲುಗಳನ್ನು ಹೆಚ್ಚುವರಿಯಾಗಿ ಓಡಿಸಲಾಗುವುದು.
196 ಜೊತೆ ರೈಲುಗಳು ಕಾರ್ಯಾಚರಣೆ ನಡೆಸಲಿದ್ದು ರೈಲ್ವೆ ವಲಯಗಳ ಈ ಪ್ರಸ್ತಾಪವನ್ನು ರೈಲ್ವೆ ಸಚಿವಾಲಯ ಅಂಗೀಕರಿಸಿದೆ. ಅಕ್ಟೋಬರ್ 20 ರಿಂದ ನವೆಂಬರ್ 30 ರವರೆಗೆ ವಿಶೇಷ ರೈಲುಗಳು ಸಂಚರಿಸಲಿವೆ. ವಲಯವಾರು ರೈಲ್ವೆ ವೇಳಾಪಟ್ಟಿಯನ್ನು ಮೊದಲೇ ಪ್ರಕಟಿಸಲಾಗುವುದು ಎಂದು ರೈಲ್ವೆ ಮಂತ್ರಾಲಯದಿಂದ ಮಾಹಿತಿ ನೀಡಲಾಗಿದೆ.
ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಜನ ಓಡಾಡುವುದರಿಂದ ಅವರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರ ಆರಂಭಿಸಲಾಗಿದೆ. ಈ ಅವಧಿಯಲ್ಲಿ ದುರ್ಗಾಪೂಜೆ, ದಸರಾ, ದೀಪಾವಳಿ ಮೊದಲಾದ ಹಬ್ಬಗಳಿರುತ್ತವೆ. ಕೊಲ್ಕತ್ತಾ, ಪಾಟ್ನಾ, ವಾರಣಾಸಿ, ಲಖ್ನೋ ಮೊದಲಾದ ಸ್ಥಳಗಳಿಗೆ ಸೇರಿದಂತೆ ದೇಶಾದ್ಯಂತ ರೈಲು ಸೇವೆ ಇರುತ್ತದೆ.
ಇದುವರೆಗೆ 300ಕ್ಕೂ ಹೆಚ್ಚು ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳು ನಿಯಮಿತವಾಗಿ ಸಂಚರಿಸುತ್ತಿದ್ದು ಹಬ್ಬದ ಪ್ರಯುಕ್ತ ನವೆಂಬರ್ 30 ರವರೆಗೆ ವಿಶೇಷ ರೈಲುಗಳ ಕಾರ್ಯಾಚರಣೆ ಇರುತ್ತದೆ. 55 ಕಿಲೋಮೀಟರ್ ವೇಗದಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಹೇಳಲಾಗಿದೆ.