alex Certify ಹಬ್ಬದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಖರೀದಿಸಬೇಕೆಂದುಕೊಂಡವರಿಗೆ ಇಲ್ಲಿದೆ‌ ಬಂಪರ್‌ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಖರೀದಿಸಬೇಕೆಂದುಕೊಂಡವರಿಗೆ ಇಲ್ಲಿದೆ‌ ಬಂಪರ್‌ ಸುದ್ದಿ

ವಾಹನ ತಯಾರಿಕೆ ಹಾಗೂ ಮಾರಾಟ ಉದ್ಯಮದಲ್ಲಿ ಜನಮನ್ನಣೆ ಗಳಿಸಿಯೋ ಪಿಯಾಜಿಯೋ ಇದೀಗ ತನ್ನ ಗ್ರಾಹಕರಿಗೆ ಹಬ್ಬದ ಆಫರ್​ ಕೊಡೋಕೆ ಮುಂದಾಗಿದೆ. ಅಪ್ರಿಲಿಯಾ ಹಾಗೂ ವೆಸ್ಪಾ ರೇಂಜ್​ನ ಸ್ಕೂಟರ್​ ಖರೀದಿದಾರರಿಗೆ 10,000 ರೂಪಾಯಿಯವರೆಗೆ ವಿಶೇಷ ಲಾಭವನ್ನ ನೀಡಲಿದೆ ಪಿಯಾಜಿಯೋ. ಈ ಮಾಡೆಲ್​ನ ವಾಹನಗಳನ್ನ ನೀವು ಬುಕ್​ ಮಾಡಿದ್ರೆ ನಿಮಗೆ 7,000 ಸಾವಿರ ರೂಪಾಯಿವರೆಗಿನ ವಿಮೆ, 4,000 ಮೌಲ್ಯದ ಉಚಿತ ಸಲಕರಣೆಗಳು ಹಾಗೂ 2,000 ರೂಪಾಯಿ ಮೌಲ್ಯದ ಬುಕ್ಕಿಂಗ್​ ಬೆನಿಫಿಟ್ ​ನ್ನ ನೀವು ಪಡೆಯಬಹುದಾಗಿದೆ .

ಇದರ ಜೊತೆಯಲ್ಲಿ ಹೊಸ ಗ್ರಾಹಕರಿಗೆ ಒಂದು ವರ್ಷಗಳವರೆಗೆ ಗಾಡಿಯ ಫ್ರೀ ಸರ್ವೀಸ್​ ಹಾಗೂ 5 ವರ್ಷಗಳವರೆಗೆ ವಾರಂಟಿ ಅವಧಿ ನೀಡಲು ಕಂಪನಿ ನಿರ್ಧರಿಸಿದೆ. ಈ ಆಫರ್​ ನವೆಂಬರ್​ 16, 2020ರ ವರೆಗೆ ಜಾರಿಯಲ್ಲಿ ಇರಲಿದೆ.

ಇನ್ನು ಹಬ್ಬದ ವಿಶೇಷ ಕೊಡುಗೆ ವಿಚಾರವಾಗಿ ಮಾತನಾಡಿದ ಕಂಪನಿ ಚೇರ್​ಮನ್​ ಹಾಗೂ ಎಂಡಿ, ನಮ್ಮ ಗ್ರಾಹಕರಿಗೆ ದಸರಾ ಹಾಗೂ ದೀಪಾವಳಿ ಹಬ್ಬದ ಸಂಭ್ರಮವನ್ನ ಹೆಚ್ಚಿಸುವ ಸಲುವಾಗಿ ಈ ವಿಶೇಷ ಆಫರ್​ಗಳನ್ನ ನೀಡಿದ್ದೇವೆ. ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್ ಖರೀದಿದಾರರನ್ನ ಸಂತುಷ್ಠಗೊಳಿಸೋದೇ ನಮ್ಮ ಗುರಿ ಅಂತಾ ಹೇಳಿದ್ರು.

ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ಮೂಲದ ಒಟಿಒ ಕ್ಯಾಪಿಟಲ್​ ಜೊತೆ ಸಹಭಾಗಿತ್ವ ಪಡೆದಿರುವ ಪಿಯಾಜಿಯೋ ಕಂಪನಿ ಈ ಮೂಲಕ ಗ್ರಾಹಕರಿಗೆ ಲೀಸ್​ ಅಥವಾ ಗುತ್ತಿಗೆ ಆಧಾರದಲ್ಲಿ ಬೈಕ್ ​ಗಳನ್ನ ನೀಡಲಿದೆ. ಅಂದರೆ ಡೌನ್​ ಪೇಮೆಂಟ್​ ಮಾಡದೇ ನೀವು ಬೈಕ್ ​ಗಳನ್ನ ಮಾಸಿಕ ಇಎಂಐ ಪಾವತಿಸಿ ಪಡೆಯಬಹುದಾಗಿದೆ. ಈ ವಿಶೇಷ ಸೇವೆ ಪ್ರಾಥಮಿಕ ಹಂತವಾಗಿ ಬೆಂಗಳೂರು ಹಾಗೂ ಪುಣೆಯಲ್ಲಿ ಮಾತ್ರ ಜಾರಿಯಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...