ಬಾಲಿವುಡ್ ನ ಮಾದರಿ ಕಪಲ್ ಗಳ ಪೈಕಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರದ್ದೂ ಒಂದು. ಅವರಿಬ್ಬರ ಮಧ್ಯೆ ವೈಮನಸ್ಸು ಉಂಟಾದಾಗ ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬ ಸಂಗತಿಯನ್ನು ಅವರು ಬಿಚ್ಚಿಟ್ಟಿದ್ದಾರೆ.
ಎಲ್ಲಾ ದಾಂಪತ್ಯದಂತೆ ನಮ್ಮಿಬ್ಬರ ಮಧ್ಯೆಯೂ ಜಗಳಗಳಾಗುತ್ತವೆ ಎಂದಿದ್ದಾರೆ ಐಶ್ವರ್ಯಾ. ದಾಂಪತ್ಯ ಎಂಬುದು ಎರಡು ಗಾಡಿಯ ಚಕ್ರ. ಎಲ್ಲವನ್ನೂ ಹೊಂದಿಸಿಕೊಂಡು ಹೋಗುವುದು ಜಾಣ್ಮೆ. ನಮ್ಮಿಬ್ಬರ ಮಧ್ಯೆ ಜಗಳ ಬಂದರೆ ನಾನೇ ಮೊದಲು ಕ್ಷಮೆಯಾಚಿಸುತ್ತೇನೆ ಮತ್ತು ಆ ವಿಷಯ ಮುಂದುವರಿಯದಂತೆ ಎಚ್ಚರಿಕೆ ವಹಿಸುತ್ತೇನೆ ಎಂದಿದ್ದಾರೆ ಐಶ್ವರ್ಯಾ.
ಯಾವುದೇ ಭಿನ್ನಾಭಿಪ್ರಾಯವನ್ನು ಅಲ್ಲೇ ಬಗೆಹರಿಸಿ, ಮರೆತು ಬಿಡಬೇಕು. ಮತ್ತೆ ಅದೇ ತಪ್ಪು ಮಾಡಿದರೆ ಸಂಗಾತಿಗೆ ನೋವಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದಿದ್ದಾರೆ.
ಈ ಜೋಡಿಗೆ ಆರಾಧ್ಯ ಎಂಬ ಮುದ್ದಾದ ಮಗಳು ಇದ್ದಾಳೆ. ಇವರಿಬ್ಬರು ಜೊತೆಯಾಗಿ ಕುಚ್ ನಾ ಕಹೋ, ಉಮ್ರಾವ್ ಜಾನ್, ಧೂಮ್ 2, ಗುರು ಸೇರಿದಂತೆ ಇತರೆ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ವಿವಾಹದ ಬಳಿಕ ಸರ್ಕಾರ್ ರಾಜ್ ಮತ್ತು ರಾವಣ್ ಚಿತ್ರಗಳು ಬಿಡುಗಡೆಯಾಗಿವೆ.