ಮಹಾರಾಷ್ಟ್ರದಲ್ಲಿ ದೇವಾಲಯಗಳ ಪುನಾರಂಭ ಸಂಬಂಧ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನಡುವಿನ ವಾಕ್ಸಮರ ಮುಗಿಯೋವಂತೆ ಕಾಣುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಬಂದ್ ಮಾಡಲಾಗಿದ್ದ ದೇವಾಲಯಗಳ ಬಾಗಿಲು ತೆರೆಯುವ ಸಂಬಂಧ ರಾಜ್ಯಪಾಲರು ಕಳುಹಿಸಿದ್ದ ಪತ್ರಕ್ಕೆ ಉದ್ಧವ್ ಠಾಕ್ರೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದ ರಾಜ್ಯಪಾಲ ಕೋಶಿಯಾರಿ, ಕೊರೊನಾ ನಡುವೆಯೂ ನೀವು ಬಾರ್ ಹಾಗೂ ರೆಸ್ಟೋರೆಂಟ್ಗಳನ್ನ ಓಪನ್ ಮಾಡಿದ್ದೀರಾ. ಆದರೆ ದೇವಾಲಯಗಳನ್ನ ತೆರೆಯುದಕ್ಕೆ ಮಾತ್ರ ನಿರ್ಬಂಧ ಹೇರಿದ್ದೀರಾ. ಸದಾ ಹಿಂದೂತ್ವದ ಬಗ್ಗೆ ಮಾತನಾಡೋ ನೀವು ಇದೀಗ ಜಾತ್ಯಾತೀತರಾದ್ರಾ ಎಂದು ಪ್ರಶ್ನೆ ಮಾಡಿದ್ದರು.
ರಾಜ್ಯಪಾಲರ ಪ್ರಶ್ನೆಗೆ ಖಾರವಾಗಿ ಪ್ರತ್ಯುತ್ತರ ನೀಡಿದ ಉದ್ಧವ್ ಠಾಕ್ರೆ, ಪತ್ರದ ಮೂಲಕ ನೀವು ನನ್ನ ಹಿಂದೂತ್ವವನ್ನ ಪ್ರಶ್ನೆ ಮಾಡಿದ್ದೀರಾ. ಆದರೆ ನನಗೆ ನಿಮ್ಮಿಂದ ಹಿಂದೂತ್ವದ ಪ್ರಮಾಣ ಪತ್ರ ಬೇಕಿಲ್ಲ. ಮಹಾರಾಷ್ಟ್ರವನ್ನ ಪಾಕ್ಗೆ ಹೋಲಿಸಿದವರನ್ನ ನೀವು ಮನೆಗೆ ಆಹ್ವಾನಿಸುತ್ತೀರಾ. ಆದರೆ ಅದು ನನ್ನ ಹಿಂದೂತ್ವದ ಚಿಂತನೆಯಲ್ಲ ಅಂತಾ ಟಾಂಗ್ ನೀಡಿದ್ದಾರೆ.