ಸೋಮವಾರವಷ್ಟೇ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿರುವ ನಟಿ ಖುಷ್ಬೂ ಸುಂದರ್ ಕಾಂಗ್ರೆಸ್ ಒಂದು ಬುದ್ಧಿ ಮಾಂದ್ಯರ ಪಕ್ಷ ಅಂತಾ ಲೇವಡಿ ಮಾಡಿದ್ದಾರೆ. ಸೋಮವಾರ ಚೆನ್ನೈಗೆ ಬಂದಿಳಿದ ಬಳಿಕ ಮಾತನಾಡಿದ ಅವ್ರು ನಾನು ಬುದ್ಧಿಗೇಡಿಗಳ ಪಕ್ಷದಿಂದ ಹೊರಬಂದಿದ್ದೇನೆ ಅಂತಾ ಹೇಳಿದ್ದಾರೆ.
ಖುಷ್ಬೂ ಕಾಂಗ್ರೆಸ್ನಲ್ಲಿದ್ದರೂ ಪಕ್ಷದ ಪರ ಯಾವುದೇ ಕೆಲಸ ಮಾಡಿರಲಿಲ್ಲ. ಅವರನ್ನೇನು ಬಿಜೆಪಿ ಆಹ್ವಾನಿಸಿಲ್ಲ. ತಾನಾಗೇ ಹೋಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಖುಷ್ಬೂ ರಾಜೀನಾಮೆಯಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದ್ದ ಟಿಎನ್ಸಿಸಿ ಅಧ್ಯಕ್ಷ ಅಲಗಿರಿ ಹೇಳಿಕೆಗೆ ಖುಷ್ಬು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಚೆನ್ನೈಗೆ ಬಂದಿಳಿದ ಬಳಿಕ ಬಿಜೆಪಿಯಿಂದ ಭರ್ಜರಿ ಸ್ವಾಗತ ಸ್ವೀಕರಿಸಿದ ನಂತರ ಮಾತನಾಡಿದ ಖುಷ್ಬೂ ನಾನು ಕಳೆದ 6 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದೆ. ಪಕ್ಷದ ಅಭಿವೃದ್ಧಿಗಾಗಿ ಸಾಕಷ್ಟು ಪರಿಶ್ರಮವನ್ನೂ ಪಟ್ಟಿದ್ದೆ. ಆದ್ರೀಗ ಈ ಬುದ್ಧಿಮಾಂದ್ಯ ಪಕ್ಷದಿಂದ ಹೊರನಡೆದಿದ್ದೇನೆ ಅಂತಾ ವ್ಯಂಗ್ಯವಾಡಿದ್ರು.