ಜನಪ್ರಿಯ ಆಭರಣ ಬ್ರಾಂಡ್ಗಳಲ್ಲೊಂದಾದ ಟೈಟಾನ್ ಗ್ರೂಪ್ ನ ತನಿಶ್ಕ್ ಅವರ ಜಾಹೀರಾತಿಗೆ ಟ್ವಿಟರ್ನಲ್ಲಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಜಾಹೀರಾತನ್ನ ತನಿಶ್ಕ್ ಡಿಲೀಟ್ ಮಾಡಿದೆ.
ಹಿಂದೂ ಹಾಗೂ ಮುಸ್ಲಿಂ ಐಕ್ಯತೆಯ ಸಾರಾಂಶವನ್ನ ಇಟ್ಟುಕೊಂಡು ಜಾಹೀರಾತನ್ನ ಚಿತ್ರೀಕರಿಸಲಾಗಿತ್ತು. ಜಾಹೀರಾತಿನಲ್ಲಿ ಮುಸ್ಲಿಂ ಮನೆಯ ಹಿಂದೂ ಸೊಸೆಯ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮುಸ್ಲಿಂ ಮಹಿಳೆ ಹಿಂದೂ ಸೊಸೆಯ ಸೀಮಂತ ಕಾರ್ಯಕ್ರಮವನ್ನ ಹಿಂದೂ ಪದ್ಧತಿಯಂತೆ ನಡೆಸುತ್ತಾಳೆ. ಇದಕ್ಕೆ ಪ್ರತಿಯಾಗಿ ಸೊಸೆ ನಿಮ್ಮ ಧರ್ಮದಲ್ಲಿ ಈ ರೀತಿ ಸಂಪ್ರದಾಯವಿಲ್ಲ ಅಲ್ವಾ ಅಂತಾ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಮುಸ್ಲಿಂ ಮಹಿಳೆ ಹೆಣ್ಣುಮಕ್ಕಳನ್ನ ಸಂತೋಷವಾಗಿ ನೋಡಿಕೊಳ್ಳೋದು ಪ್ರತಿ ಮನೆಯ ಸಂಪ್ರದಾಯ ಅಂತಾ ಹೇಳುತ್ತಾಳೆ.
ಆದರೆ ಈ ಜಾಹೀರಾತನ್ನ ತನಿಶ್ಕ್ ಪ್ರಕಟಿಸ್ತಾ ಇದ್ದಂತೆ ಟ್ವಿಟರ್ನಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ಲವ್ ಜಿಹಾದ್ಗೆ ಪ್ರೇರಣೆ ನೀಡುವ ಜಾಹೀರಾತು ಅಂತಾ ಅನೇಕರು ಕುಟುಕಿದ್ದರು. ಅಲ್ಲದೇ ಬಾಯ್ ಕಾಟ್ ತನಿಶ್ಕ್ ಎಂಬ ಆಂದೋಲನವನ್ನೂ ನಡೆಸಲಾಗ್ತಾ ಇತ್ತು. ಈ ಬೆನ್ನಲ್ಲೇ ತನಿಶ್ಕ್ ತನ್ನ ಅಧಿಕೃತ ಪೇಜ್ಗಳಿಂದ ಜಾಹೀರಾತನ್ನ ರಿಮೂವ್ ಮಾಡಿತ್ತು.
ಆದರೆ ಕಾಂಗ್ರೆಸ್ ಸಂಸದ ಶಶಿ ತರೂರ್ ಜಾಹೀರಾತನ್ನ ಬಹಿಷ್ಕಾರ ಮಾಡಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದೂ – ಮುಸ್ಲಿಂ ಐಕ್ಯತೆ ಸಾರಲು ಹೊರಟ ಜಾಹೀರಾತನ್ನ ಮಾಡಿದ್ದಕ್ಕೆ ತನಿಶ್ಕ್ ಕಂಪನಿಯನ್ನೇ ಬಹಿಷ್ಕಾರಕ್ಕೆ ಕರೆ ನೀಡಲಾಯ್ತು. ಹಾಗಿದ್ದ ಮೇಲೆ ಹಿಂದೂ – ಮುಸ್ಲಿಂ ಐಕ್ಯತೆಗಾಗಿ ಬಹುಕಾಲದಿಂದ ಇರುವ ಚಿಹ್ನೆಯನ್ನ ಏಕೆ ಬಹಿಷ್ಕಾರ ಮಾಡಬಾರದು ಅಂತಾ ಬರೆಯೋ ಮೂಲಕ ಟ್ವಿಟರ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
https://twitter.com/ShashiTharoor/status/1315833504253374464?ref_src=twsrc%5Etfw%7Ctwcamp%5Etweetembed%7Ctwterm%5E1315833504253374464%7Ctwgr%5Eshare_3&ref_url=https%3A%2F%2Fwww.ndtv.com%2Findia-news%2Fafter-boycotttanishq-trend-shashi-tharoor-asks-why-dont-they-boycott-india-2309248