alex Certify ಮನೆಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಯ್ತು ತಾಯಿಯನ್ನು ರಕ್ಷಿಸಲು ಪುಟ್ಟ ಪೋರ ಮಾಡಿದ ಹೋರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಯ್ತು ತಾಯಿಯನ್ನು ರಕ್ಷಿಸಲು ಪುಟ್ಟ ಪೋರ ಮಾಡಿದ ಹೋರಾಟ

ಅಮೆರಿಕದ 5 ವರ್ಷದ ಬಾಲಕ ತನ್ನ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ದುಷ್ಕರ್ಮಿಗಳ ವಿರುದ್ಧ ಹೋರಾಡೋ ಮೂಲಕ ತನ್ನ ಸಾಹಸ ಹಾಗೂ ಸಮಯಪ್ರಜ್ಞೆ ತೋರಿದ್ದಾನೆ.

ಪುಟ್ಟ ಬಾಲಕ ಡೇವಿಡ್​ ಜಾನ್ಸನ್​ ಮತ್ತಾತನ ತಾಯಿ ತಮಿಕಾ ರೇಡ್​ ಮನೆಯಲ್ಲಿದ್ದ ವೇಳೆ ಗನ್​ ಹಿಡಿದಿದ್ದ ಮುಸುಕುಧಾರಿಗಳು ಏಕಾಏಕಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಮಾತ್ರವಲ್ಲದೇ ತಾಯಿ ತಮಿಕಾ ಹಣೆಗೆ ಗನ್​ ಪಾಯಿಂಟ್​ ಇಟ್ಟು ಬೆದರಿಸೋಕೆ ಮುಂದಾಗಿದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಬಾಲಕ ಡೇವಿಡ್​ ದುಷ್ಕರ್ಮಿಗಳಲ್ಲಿ ಒಬ್ಬನನ್ನ ಎಳೆಯಲು ಯತ್ನಿಸಿದ್ದಾನೆ. ಹಾಗೂ ತನ್ನ ಆಟಿಕೆ ಸಾಮಗ್ರಿಗಳನ್ನ ಕಳ್ಳರ ಮೇಲೆ ಎಸೆಯೋ ಮೂಲಕ ತನ್ನ ತಾಯಿಯನ್ನ ರಕ್ಷಿಸೋಕೆ ಮುಂದಾಗಿದ್ದಾನೆ.

ಅದೃಷ್ಟವಶಾತ್​ ಈ ಘಟನೆಯಿಂದ ತಾಯಿ – ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮನೆಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಪುಟ್ಟ ಪೋರನ ಸಾಹಸ ಸೆರೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...