
ಆರಂಭದ ದಿನದಿಂದಲೂ ಕೊರೊನಾ ವೈರಸ್ ಬಗ್ಗೆ ತುಂಬಾನೇ ಲಘುವಾಗಿ ಮಾತನಾಡ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ಗೂ ಕೆಲ ದಿನಗಳ ಹಿಂದಷ್ಟೇ ಕೋವಿಡ್ ದೃಢಪಟ್ಟಿತ್ತು. ಆದರೆ ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಟ್ರಂಪ್ ಚುನಾವಣಾ ರ್ಯಾಲಿಯನ್ನೂ ನಡೆಸೋಕೆ ಶುರು ಮಾಡಿದ್ದಾರೆ.
2016ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ವೈಟ್ಹೌಸ್ನಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ರು. ಅದೇ ರೀತಿ ಈ ಬಾರಿ ಟ್ರಂಪ್ ಕೂಡ ವಿಚಿತ್ರವಾಗಿ ನೃತ್ಯ ಮಾಡಿದ್ದಾರೆ. ದಿ ವಿಲೇಜ್ ಪೀಪಲ್ಸ್ ವೈಎಂಸಿಎಂ ಎಂಬ ನಿರ್ಗಮನದ ಗೀತೆಗೆ ಟ್ರಂಪ್ ಹೆಜ್ಜೆ ಹಾಕಿದ್ರು. ಈ ವೇಳೆ ತುಂಬಾನೇ ಚುರುಕಾಗೇ ಇದ್ದ ಟ್ರಂಪ್ ನಡವಳಿಕೆ ಕೊರೊನಾದಿಂದ ನನಗೇನೂ ಆಗಿಲ್ಲ ಅನ್ನೋದನ್ನ ಸಾಬೀತು ಪಡಿಸಲು ಯತ್ನಿಸುತ್ತಿದ್ದಂತೆ ಕಾಣಿಸುತ್ತಿತ್ತು. ಇನ್ನು ಹಲವಾರು ಮಂದಿ ಸೇರಿದ್ದ ಈ ರ್ಯಾಲಿಯಲ್ಲಿ ಮಾಸ್ಕ್ ಆಗಲಿ ಸಾಮಾಜಿಕ ಅಂತರವಾಗಲಿ ಇದ್ದಂತೆ ಕಂಡುಬರಲಿಲ್ಲ.
https://twitter.com/potus_phony/status/1315031181654544384?ref_src=twsrc%5Etfw%7Ctwcamp%5Etweetembed%7Ctwterm%5E1315031181654544384%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fdonald-trump-started-dancing-awkwardly-at-a-rally-and-internet-wants-to-unsee-it-2958500.html