alex Certify ಆಲಿಕಲ್ಲಿನ ಬಡಿತಕ್ಕೆ ಹಾರುತ್ತಿದ್ದ ವಿಮಾನದ ಗಾಜು ಪುಡಿಪುಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲಿಕಲ್ಲಿನ ಬಡಿತಕ್ಕೆ ಹಾರುತ್ತಿದ್ದ ವಿಮಾನದ ಗಾಜು ಪುಡಿಪುಡಿ

ಅಮೆರಿಕಾಕ್ಕೆ ಸೇರಿದ ಯುಎ 349 ವಿಮಾನದ ಗಾಜಿಗೆ ಆಲಿಕಲ್ಲು ಬಡಿದ ಕಾರಣ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಚಿಕಾಗೋದಿಂದ ಪ್ರಯಾಣಿಕರ ಸಮೇತ ಹೊರಟಿದ್ದ ಈ ವಿಮಾನಕ್ಕೆ ಆಲಿಕಲ್ಲು ಮಳೆ ಎದುರಾಗಿದೆ.

ಆದರೂ ಪೈಲಟ್​ ವಿಮಾನದ ಹಾರಾಟ ಮುಂದುವರಿಸಿದ್ರು. ಆದರೆ ಆಲಿಕಲ್ಲು ನೇರವಾಗಿ ವಿಮಾನದ ವಿಂಡ್​ ಶೀಲ್ಡ್​ಗೆ ಬಂದು ಬಡಿದಿದೆ.ಇದರಿಂದಾಗಿ ವಿಂಡ್​ಶೀಲ್ಡ್​ ಸಂಪೂರ್ಣ ಬಿರುಕು ಬಿಟ್ಟಿದೆ. ಹೀಗಾಗಿ ಮಿಚಿಗನ್​ ಸರೋವರದ ಸಮೀಪ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

ಪೈಲಟ್​ನ ಸಮಯಪ್ರಜ್ಞೆಯಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲ. ಇದೇ ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದ ಪ್ರಯಾಣಿಕ ಅಲೆಕ್ಸ್ ಲ್ಯಾಂಗ್​​ ಎಂಬವರು ತಮ್ಮ ಟ್ವಿಟರ್​​ ಖಾತೆಯಲ್ಲಿ ಬಿರುಕುಬಿಟ್ಟ ವಿಮಾನದ ಗಾಜಿನ ಫೋಟೋವೊಂದನ್ನ ಶೇರ್​ ಮಾಡಿದ್ದಾರೆ.

https://twitter.com/ArexRang/status/1315752217190727685?ref_src=twsrc%5Etfw%7Ctwcamp%5Etweetembed%7Ctwterm%5E1315752217190727685%7Ctwgr%5Eshare_3&ref_url=https%3A%2F%2Fwww.ndtv.com%2Foffbeat%2Fplane-turns-around-after-hail-cracks-windshield-2309305

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...