ಎಲ್ಲಾ ರೀತಿಯ ಆಧಾರ್ ಸೇವೆಗಳಿಗಾಗಿ ಯುಐಡಿಎಐ ಆಧಾರ್ ಸೇವಾ ಕೇಂದ್ರ ತೆರೆದಿದೆ. ಈ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಯಾವುದೇ ನಾಗರಿಕರು ತಮ್ಮ ಆಧಾರ್‌ಗೆ ಸಂಬಂಧಿಸಿದ ಯಾವುದೇ ಸೇವೆಯನ್ನು ನೇರವಾಗಿ ಪಡೆಯಬಹುದು.
ಆಧಾರ್ ಸೇವಾ ಕೇಂದ್ರವು ವಾರ ಎಲ್ಲ ದಿನ ಬೆಳಿಗ್ಗೆ 09:30 ರಿಂದ ಸಂಜೆ 05:30 ರವರೆಗೆ ತೆರೆದಿರುತ್ತದೆ. ಆಧಾರ್ ಮಾಹಿತಿ ನವೀಕರಣ ಸೇರಿದಂತೆ ಯಾವುದೇ ಆಧಾರ್ ಸೇವೆಯನ್ನು ಇಲ್ಲಿ ಪಡೆಯಬಹುದು. ಆಧಾರ್ ಕೇಂದ್ರಕ್ಕೆ ಹೋಗಲು ನೀವು ಆನ್ಲೈನ್ ನಲ್ಲಿಯೇ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬಹುದು.
ಮೊದಲು ನೀವು ಯುಐಡಿಎಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ ಮೈ ಆಧಾರ್ ಮೇಲೆ ಕ್ಲಿಕ್ ಮಾಡಬೇಕು. ಎರಡನೇ ಹಂತದಲ್ಲಿ ಡ್ರಾಪ್ ಡೌನ್ ಮೆನುಗೆ ಹೋಗಿ ಬುಕ್ ಎ ಅಪಾಯಿಂಟ್ಮೆಂಟ್ ಮೇಲೆ ಕ್ಲಿಕ್ ಮಾಡಬೇಕು. ನಂತ್ರ ನೀವು ನಿಮ್ಮ ನಗರ ಹಾಗೂ ಸ್ಥಳದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ನಂತ್ರ New Aadhaar, Aadhaar Update ಅಥವಾ Manage Appointment ಇದ್ರಲ್ಲಿ ಯಾವುದು ಬೇಕು ಅದನ್ನು ಕ್ಲಿಕ್ ಮಾಡಬೇಕು. ನೀವು ಆಧಾರ್ ನವೀಕರಣದ ಮೇಲೆ ಕ್ಲಿಕ್ ಮಾಡಿದ್ರೆ ಮೊಬೈಲ್ ನಂಬರ್ ಹಾಕಬೇಕಾಗುತ್ತದೆ. ನಿಮ್ಮ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಒಟಿಪಿ ಹಾಕಿದ ನಂತ್ರ ದಿನಾಂಕ ಹಾಗೂ ಸಮಯವನ್ನು ಆಯ್ಕೆ ಮಾಡಬೇಕಾಗುತ್ತದೆ.