ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಅಕ್ಟೋಬರ್ 13 ರಂದು ಸ್ಥಗಿತಗೊಂಡಿದೆ. ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ನೀಡಿದೆ. ಗ್ರಾಹಕರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಬ್ಯಾಂಕಿನ ಎಟಿಎಂ ಮತ್ತು ಪಿಒಎಸ್ ಎಂದಿನಂತೆ ಕಾರ್ಯನಿರ್ವಹಿಸಲಿದೆ.
ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಯಾವುದೇ ಸಮಸ್ಯೆಯಿಲ್ಲ. ಹಾಗೆ ಕಾರ್ಡ್ ಮೂಲಕ ನೀವು ಶಾಪಿಂಗ್ ಮಾಡಬಹುದಾಗಿದೆ. ಅನಾನುಕೂಲತೆಗಾಗಿ ವಿಷಾದಿಸುತ್ತಿದೆ. ಗ್ರಾಹಕರು ಸ್ವಲ್ಪ ಸಹಕರಿಸಬೇಕೆಂದು ಎಸ್ಬಿಐ ಬ್ಯಾಂಕ್ ಟ್ವೀಟ್ ಮಾಡಿದೆ.
ಮಧ್ಯಾಹ್ನದ ವೇಳೆಗೆ ಆನ್ಲೈನ್ ಬ್ಯಾಂಕಿಂಗ್ ಸೇವೆ ಲಭ್ಯವಾಗಲಿದೆ ಎಂದು ಬ್ಯಾಂಕ್ ಹೇಳಿದೆ. ಎಸ್ಬಿಐ ಗ್ರಾಹಕರು ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ. ಯೋನೋ ಅಪ್ಲಿಕೇಷನ್ ಕೂಡ ಕೆಲಸ ಮಾಡ್ತಿಲ್ಲ ಎನ್ನಲಾಗಿದೆ. ಟ್ವಿಟ್ ಮಾಡಿ ಮಾಹಿತಿ ನೀಡುವ ಬದಲು ಎಲ್ಲ ಗ್ರಾಹಕರಿಗೆ ಎಸ್ಎಂಎಸ್ ಮಾಡಿ ಮಾಹಿತಿ ನೀಡಬೇಕೆಂದು ಟ್ವಿಟ್ವರ್ ನಲ್ಲಿ ಗ್ರಾಹಕರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಆಸ್ತಿಗಳು, ಠೇವಣಿಗಳು, ಶಾಖೆಗಳು, ಗ್ರಾಹಕರು ಮತ್ತು ಉದ್ಯೋಗಿಗಳ ವಿಷಯದಲ್ಲಿ ಎಸ್‌ಬಿಐ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದೆ. ಎಸ್‌ಬಿಐ ಗೃಹ ಸಾಲಗಳಲ್ಲಿ ಸುಮಾರು ಶೇಕಡಾ 34ರಷ್ಟು ಮತ್ತು ವಾಹನ ಸಾಲ ವಿಭಾಗದಲ್ಲಿ ಸುಮಾರು ಶೇಕಡಾ 33 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.