ರಾಜಸ್ಥಾನದಲ್ಲಿ ಅಪರಾಧಗಳು ಹೆಚ್ಚಾಗ್ತಿವೆ. ಕರೌಲಿಯಲ್ಲಿ, ವೃದ್ಧ ಪೂಜಾರಿಯನ್ನು ಪೆಟ್ರೋಲ್ ಹಾಕಿ ಜೀವಂತವಾಗಿ ಸುಡುವ ಪ್ರಕರಣ ಇನ್ನೂ ತಣ್ಣಗಾಗಿಲ್ಲ.ಸಿಕಾರ್ನಲ್ಲಿ ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವೃದ್ಧನನ್ನು ಕಲ್ಲುಗಳಿಂದ ಹೊಡೆದು ಸಾಯಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ವೃದ್ಧನನ್ನು ಮಧ್ಯರಾತ್ರಿ ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ. ಸಣ್ಣ ವಿಷ್ಯಕ್ಕೆ ಮೃತ ಓಂ ಸಿಂಗ್ ಹಾಗೂ ಯುವಕರ ಗುಂಪಿನ ಮಧ್ಯೆ ಗಲಾಟೆ ನಡೆದಿತ್ತಂತೆ. ಮಧ್ಯರಾತ್ರಿ ಯುವಕರು ವೃದ್ಧನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ವೃದ್ಧನ ಮಗನಿಗೂ ಕಲ್ಲಿನ ಏಟು ಬಿದ್ದಿದೆ.
ಓಂ ಸಿಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮಗನಿಗೆ ಚಿಕಿತ್ಸೆ ನೀಡಲಾಗ್ತಿದೆ. ಕರೌಲಿಯಲ್ಲಿ ಎರಡು ದಿನಗಳ ಹಿಂದೆ ವೃದ್ಧ ಪೂಜಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಸವಾಯಿ ಮಾನ್ಸಿಂಗ್ ಮರುದಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ರಾಜಸ್ಥಾನದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗ್ತಿದ್ದು, ಜನರು ಆತಂಕದಲ್ಲಿ ಬದುಕುವಂತಾಗಿದೆ.