ದಾವಣಗೆರೆ: ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆ ಹೆಚ್. ಕಲ್ಪನಹಳ್ಳಿ ಸಮೀಪ ನಡೆದಿದೆ.
ತುಂಗಾಭದ್ರಾ ಕಾಲುವೆಗೆ ಹಾರಿ 12 ವರ್ಷದ ಹನ್ಸಿಕಾ, 9 ವರ್ಷದ ನೂತನ್, 38 ವರ್ಷದ ಶ್ರೀದೇವಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ದಾವಣಗೆರೆ ಜಯನಗರದಲ್ಲಿ ವಾಸವಾಗಿದ್ದ ಶ್ರೀದೇವಿ ದಾವಣಗೆರೆ ಖಾಸಗಿ ಪ್ರೌಡಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಅವರ ಪತಿ ಪಿಯುಸಿ ಕಾಲೇಜ್ ಪ್ರಾಂಶುಪಾಲರಾಗಿದ್ದು, ಮನೆ ನಿರ್ಮಾಣ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿತ್ತು ಎನ್ನಲಾಗಿದೆ.
ಸ್ಕೂಟಿಯಲ್ಲಿ ಮಕ್ಕಳನ್ನು ಕಾಲುವೆ ಬಳಿ ಕರೆತಂದ ಶ್ರೀದೇವಿ ಅವರು ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಕಾಲುವೆಗೆ ಹಾರಿದ್ದಾರೆ. ಮೂವರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.