alex Certify ನಾವು ಮತ್ತೆ ಒಂದಾಗ್ತೀವಿ ಎಂದ ಪ್ರೇಮಕವಿ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾವು ಮತ್ತೆ ಒಂದಾಗ್ತೀವಿ ಎಂದ ಪ್ರೇಮಕವಿ ಪತ್ನಿ

ಬೆಳಗಾವಿ: ಯಾವುದೋ ಒಂದು ಕೆಟ್ಟ ಸಂದರ್ಭದಿಂದಾಗಿ ನಮ್ಮಿಬ್ಬರ ನಡುವೆ ಬಿರುಕುಂಟಾಗಿತ್ತು. ನನ್ನ ಮೇಲೆ ಯಾರೋ ಪ್ರಭಾವ ಬೀರಿದ್ದರು. ಆದರೀಗ ಎಲ್ಲವೂ ಸರಿ ಹೋಗಿದೆ. ನಾನು ವಿಚ್ಛೇದನ ಅರ್ಜಿ ಹಿಂಪಡೆದಿದ್ದೇನೆ. ಕಲ್ಯಾಣ್ ಹಾಗೂ ನಾನು ಮತ್ತೆ ಒಂದಾಗುತ್ತೇವೆ ಎಂದು ಪ್ರೇಮಕವಿ, ಚಿತ್ರಸಾಹಿತಿ ಕೆ. ಕಲ್ಯಾಣ್ ಪತ್ನಿ ಅಶ್ವಿನಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅಶ್ವಿನಿ, ಆರೋಪಿ ಶಿವಾನಂದ ವಾಲಿ ನಮ್ಮನ್ನು ತಾನು ಹೇಳಿದಂತೆ ಕೇಳುವ ಪರಿಸ್ಥಿತಿ ನಿರ್ಮಾಣ ಮಾಡಿಬಿಟ್ಟಿದ್ದ. ನಮ್ಮ ಮೇಲೆ ತುಂಬಾ ಒತ್ತಡ ಹೇರುತ್ತಿದ್ದ. ಕೆಟ್ಟ ಘಳಿಗೆ, ಅಂತಹ ಪರಿಸ್ಥಿತಿ ನಿರ್ಮಾಣವಾಯಿತು. ಆದರೀಗ ಬೆಳಗಾವಿ ಪೊಲೀಸರು ದೇವರಂತೆ ಬಂದು ನನಗೆ ಸಹಾಯ ಮಾಡಿದ್ದಾರೆ. ನಡೆದ ಕೆಟ್ಟ ಘಟನೆಗಳನ್ನು ಮರೆಯಲು ನಾನು ಪ್ರಯತ್ನಿಸುತ್ತಿದ್ದೇನೆ.

ವಿಚ್ಛೇದನ ಅರ್ಜಿಯನ್ನು ನಾನು ಹಿಂಪಡೆದಿದ್ದೇನೆ. ನಾನು ಹಾಗೂ ಕೆ. ಕಲ್ಯಾಣ್ ಇನ್ನೂ ಭೇಟಿಯಾಗಿ ಪರಸ್ಪರ ಮಾತನಾಡಿಲ್ಲ. ಇಬ್ಬರೂ ಕುಳಿತು ಮಾತನಾಡಿದರೆ ಎಲ್ಲವೂ ಸರಿ ಹೋಗಲಿದೆ. ನಾವು ಮತ್ತೆ ಒಂದಾಗಿ ಬಾಳುತ್ತೇವೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...