ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊರೊನಾದಿಂದ ಚೇತರಿಸಿಕೊಳ್ತಿದ್ದಾರೆ. ಆದ್ರೆ ಟ್ರಂಪ್ ಕೊರೊನಾದಿಂದ ಗುಣಮುಖರಾಗಲೆಂದು ಪ್ರಾರ್ಥಿಸಿ ಉಪವಾಸ ಕುಳಿತಿದ್ದ ವ್ಯಕ್ತಿ ಇಹಲೋಕ ತ್ಯಜಿಸಿದ್ದಾನೆ. ಘಟನೆ ತೆಲಂಗಾಣದಲ್ಲಿ ನಡೆದಿದೆ.
ಬುಸಾ ಕೃಷ್ಣ ರಾಜು ಕಳೆದ ಹಲವು ದಿನಗಳಿಂದ ಉಪವಾಸ ಕುಳಿತಿದ್ದ. ಟ್ರಂಪ್ ಚೇತರಿಕೆ ಪ್ರಾರ್ಥಿಸಿ ಆತ ಉಪವಾಸ ಮಾಡ್ತಿದ್ದ. ನಿದ್ರೆಯ ಕೊರತೆ ಮತ್ತು ಹಸಿವಿನಿಂದಾಗಿ ಭಾನುವಾರ ಆನನಿಗೆ ಹೃದಯಾಘಾತವಾಗಿ ಎನ್ನಲಾಗ್ತಿದೆ.ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಸ್ಥಳದಲ್ಲಿಯೇ ಬುಸಾ ಸಾವನ್ನಪ್ಪಿದ್ದಾನೆ.
ಬುಸಾ ಕೃಷ್ಣರಾಜು ತುಫ್ರಾನ್ ನಿವಾಸಿಯಾಗಿದ್ದಾನೆ. ಬುಸಾ, ಟ್ರಂಪ್ ಅವರ ದೊಡ್ಡ ಅಭಿಮಾನಿ. ಹಿಂದಿನ ವರ್ಷ ಮನೆಯಲ್ಲಿ ಟ್ರಂಪ್ ರ ಆರು ಅಡಿ ಪ್ರತಿಮೆ ಸ್ಥಾಪಿಸಿದ್ದ. ಪ್ರತಿ ದಿನ ಟ್ರಂಪ್ ಪ್ರತಿಮೆಗೆ ಪೂಜೆ ಮಾಡ್ತಿದ್ದ. ಟ್ರಂಪ್ ಗೆ ಕೊರೊನಾ ಕಾಡ್ತಿದೆ ಎಂಬುದು ಗೊತ್ತಾಗ್ತಿದ್ದಂತೆ ಬುಸಾ ತುಂಬಾ ಅಸಮಾಧಾನಗೊಂಡಿದ್ದನಂತೆ. ಬಸುವನ್ನು ಗ್ರಾಮಸ್ಥರು ಟ್ರಂಪ್ ಕೃಷ್ಣ ಎಂದು ಕರೆಯುತ್ತಿದ್ದರಂತೆ. ಬುಸಾ ನಾಲ್ಕೈದು ದಿನಗಳಿಂದ ಊಟ, ನಿದ್ರೆ ಬಿಟ್ಟು ಪ್ರಾರ್ಥಿಸುತ್ತಿದ್ದ ಎನ್ನಲಾಗಿದೆ.
ಶಾಲೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟಿದ್ದ ಬುಸಾಗೆ ರಾಜಕೀಯದಲ್ಲಿ ಆಸಕ್ತಿಯಿತ್ತು. ಬುಸಾ ಈ ಬಾರಿಯೂ ಟ್ರಂಪ್ ಗೆಲುವಿನ ನಿರೀಕ್ಷೆಯಲ್ಲಿದ್ದ. ಹಿಂದಿನ ವರ್ಷ ಟ್ರಂಪ್ ಭಾರತಕ್ಕೆ ಬಂದಾಗ ಅವ್ರ ಭೇಟಿ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದ. ಆದ್ರೆ ಆತನ ಆಸೆ ಈಡೇರಿರಲಿಲ್ಲ.