alex Certify ಬೆರಗಾಗಿಸುತ್ತೆ ಈ ಚಿತ್ರ ರಚಿಸಲು ತೆಗೆದುಕೊಂಡಿರುವ ಸಮಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಈ ಚಿತ್ರ ರಚಿಸಲು ತೆಗೆದುಕೊಂಡಿರುವ ಸಮಯ…!

Artist's Hyper-realistic Pencil Sketch of Michael Jordan is Fooling Netizens into Calling it a Photo

ವಾಷಿಂಗ್ಟನ್: ಅಮೆರಿಕಾದ ಪ್ರಸಿದ್ಧ ರೇಖಾಚಿತ್ರಕಾರ ಕೀಗನ್ ಹಾಲ್ ಇತ್ತೀಚೆಗೆ ಇನ್ಸ್ಟಾಗ್ರಾಂ‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದು ನೆಟ್ಟಿಗರನ್ನು ದಂಗುಬಡಿಸಿದೆ. ಪ್ರಸಿದ್ಧ ಚಿತ್ರಕಾರರೂ ಸಹ ಹಾಲ್ ಅವರ ಕೈ ಚಳಕಕ್ಕೆ ದೊಡ್ಡ ಸಲಾಂ ಹೊಡೆದಿದ್ದಾರೆ.

ಪ್ರಸಿದ್ಧ ಬಾಸ್ಕೆಟ್ ಬಾಲ್ ಆಟಗಾರ ಮೈಕಲ್ ಜೋರ್ಡನ್ ಅವರು ಜಿಗಿದು ಬಾಸ್ಕೆಟ್ ಗೆ ಬಾಲ್ ಹಾಕುತ್ತಿರುವ, ಸಾವಿರಾರು ಅಭಿಮಾನಿಗಳು ಅವರನ್ನು ಪ್ರೋತ್ಸಾಹಿಸುತ್ತಿರುವ ಚಿತ್ರವನ್ನು ಕೀಗನ್ ಹಾಲ್ ಕಪ್ಪು ಬಿಳುಪಿನಲ್ಲಿ ಬಿಡಿಸಿ ತೋರಿಸಿದ್ದಾರೆ. ಪಕ್ಕಾ ಹೈ ಡೆಫಿನೀಶನ್ ಕ್ಯಾಮರಾದಲ್ಲಿ ತೆಗೆದ ಫೋಟೋದಂತೆಯೇ ಅವರ ಚಿತ್ರ ಕಾಣುತ್ತದೆ.

“ನನಗೆ ಈ ಚಿತ್ರ ಬಿಡಿಸಲು ಪೂರ್ಣ 250 ತಾಸು ಬೇಕಾಯಿತು. ಇದು ನಾ‌ನು ಮಾಡಿದ ಅತಿ‌‌ ಹೆಚ್ಚು‌ ಸಮಯದ ಚಿತ್ರ” ಎಂದು ಕೀಗನ್ ಹಾಲ್ ಇನ್ಸ್ಟಾಗ್ರಾಂ‌ ವಿಡಿಯೋಕ್ಕೆ ಕ್ಯಾಪ್ಶನ್ ಬರೆದಿದ್ದಾರೆ. “ಓ ಚಿತ್ರಕಾರನೆ ನಿನಗಿದೋ ನಮನ” ಎಂದು ಒಬ್ಬ ಕಮೆಂಟ್ ಮಾಡಿದ್ದಾನೆ.‌ ಆದರೆ, ಕೆಲವರು ಇದು ಫೋಟೋ ಆಗಿರಬೇಕು, ಇಲ್ಲವೇ ಯಾವುದೇ ತಂತ್ರಜ್ಞಾನ ಬಳಸಿರಬೇಕು ಎಂದೆಲ್ಲ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. 9 ಸಾವಿರಕ್ಕೂ ಅಧಿಕ ಜನ ವಿಡಿಯೋ ಲೈಕ್ ಮಾಡಿದ್ದು, ಇನ್ನೂ ಹಲವರು ಕಮೆಂಟಿಸಿದ್ದಾರೆ.

https://www.instagram.com/tv/CGDaEK7BRrk/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...