alex Certify ಅಬ್ಬಾ…! ದಂಗಾಗಿಸುತ್ತೆ ಈ ಹೆಬ್ಬಾವಿನ ಉದ್ದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ…! ದಂಗಾಗಿಸುತ್ತೆ ಈ ಹೆಬ್ಬಾವಿನ ಉದ್ದ

ಫ್ಲೋರಿಡಾ: ದಾಖಲೆ ಉದ್ದದ ಬರ್ಮಾ ಹಾವು ಅಥವಾ ಹೆಬ್ಬಾವನ್ನು ಈ ವಾರಾಂತ್ಯದಲ್ಲಿ ಇಬ್ಬರು ಉರಗ ರಕ್ಷಕರು ಫ್ಲೋರಿಡಾದಲ್ಲಿ ಹಿಡಿದಿದ್ದಾರೆ.‌ 18.9 ಅಡಿ ಇರುವ ಈ ಹೆಣ್ಣು ಹಾವು 47 ಕೆಜಿ ತೂಕವಿದೆ.

ಈ ಹಿಂದೆ ಅಮೆರಿಕಾದ ಫ್ಲೋರಿಡಾದಲ್ಲಿ 18.8 ಅಡಿ ಉದ್ದದ ಹೆಬ್ಬಾವನ್ನು ಹಿಡಿಯಲಾಗಿತ್ತು. ಈಗ ರ್ಯಾನ್ ಅಸ್ಬನ್ ಹಾಗೂ ಕೆವಿನ್ ಪಾವ್ಲಡಿಸ್ ಎಂಬ ಇಬ್ಬರು ಉರಗ ತಜ್ಞರು ಹಿಡಿದ 18.9 ಅಡಿ ಉದ್ದದ ಹಾವು ಅತಿ ಉದ್ದದ್ದಾಗಿದ್ದು, ಹೊಸ ದಾಖಲೆ ಬರೆದಿದೆ ಎಂದು ಪ್ಲೋರಿಡಾ ಫಿಶ್ ಆ್ಯಂಡ್ ವೈಲ್ಡ್ ಲೈಫ್ ಕನ್ಸರ್ವೇಶನ್ ಕಮಿಷನ್ ಹೇಳಿದೆ.‌

ಹೆಬ್ಬಾವುಗಳು ಫ್ಲೋರಿಡಾ ಮೂಲದವಲ್ಲ. ಅವು ಅತಿ‌ ಹೆಚ್ಚು ಆಹಾರ ಬಯಸುತ್ತವೆ. ಇದರಿಂದ ಇದ್ದ ಬಿದ್ದ ಪ್ರಾಣಿಗಳನ್ನೆಲ್ಲ ಹಿಡಿದು ತಿನ್ನುತ್ತಿವೆ. ಹೀಗಾಗಿ ಮುಂದೆ ದೇಶದ ವನ್ಯಜೀವಿ ವೃತ್ತದ ಅಸಮತೋಲನಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಹೆಬ್ಬಾವುಗಳನ್ನು ಫ್ಲೋರಿಡಾದಲ್ಲಿ ಹಿಡಿದು ಬೇರೆಡೆ ಬಿಡಲಾಗುತ್ತಿದೆ ಎಂದು ಉರಗ ತಜ್ಞರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

https://www.facebook.com/photo.php?fbid=1868937766591800&set=p.1868937766591800&type=3

https://www.facebook.com/MyFWC/posts/10158692430443349

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...