alex Certify BIG NEWS: ಬ್ಯಾಂಕ್ ಸಾಲ ಕುರಿತಾಗಿ RBI ನಿಂದ ಸುಪ್ರೀಂಕೋರ್ಟ್ ಗೆ ಮೇಲ್ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬ್ಯಾಂಕ್ ಸಾಲ ಕುರಿತಾಗಿ RBI ನಿಂದ ಸುಪ್ರೀಂಕೋರ್ಟ್ ಗೆ ಮೇಲ್ಮನವಿ

ಮುಂಬೈ: ಕೊರೋನಾ ಸಾಂಕ್ರಾಮಿಕ ರೋಗ ಕಾರಣದಿಂದ ಸಾಲಗಾರರಿಗೆ ಸಹಾಯ ಮಾಡಲು ವಿಧಿಸಲಾದ ನಿಷೇಧದಿಂದ ರಾಷ್ಟ್ರದ ಹಣಕಾಸು ವ್ಯವಸ್ಥೆಗೆ ಹೆಚ್ಚು ಹಾನಿಯಾಗಬಹುದು ಎಂದು ಬ್ಯಾಂಕುಗಳು ಹೇಳಿದ್ದು, ಬ್ಯಾಡ್ ಸಾಲವನ್ನು ಪರಿಣಾಮಕಾರಿಯಾಗಿ ವರ್ಗೀಕರಿಸಲು ಅವಕಾಶ ನೀಡುವಂತೆ ಕೋರಿ ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿದೆ.

ಯಾವುದೇ ಸಾಲವನ್ನು ನಿಷ್ಕ್ರಿಯ ಆಸ್ತಿ ಎಂದು ವರ್ಗೀಕರಿಸುವ ಬ್ಯಾಂಕುಗಳ ಮಧ್ಯಂತರ ನಿಲುಗಡೆಗೆ ತಕ್ಷಣವೇ ತೆಗೆದು ಹಾಕುವಲ್ಲಿ ವಿಫಲವಾದರೆ ಆರ್.ಬಿ.ಐ. ನಿಯಂತ್ರಕ ಆದೇಶವನ್ನು ಹಾಳು ಮಾಡುತ್ತದೆ ಎಂದು ಸುಪ್ರೀಂಕೋರ್ಟ್ ಗೆ ಶುಕ್ರವಾರ ತಡವಾಗಿ ಸಲ್ಲಿಸಿದ ಮೇಲ್ಮನವಿಯಲ್ಲಿ ಆರ್.ಬಿ.ಐ. ಹೇಳಿದೆ.

ಲಕ್ಷಾಂತರ ಸಾಲಗಾರರಿಗೆ ಪರಿಹಾರ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಕೋವಿಡ್ ಬೆಂಬಲ ಯೋಜನೆಯಡಿ 2 ಕೋಟಿ ವರೆಗಿನ ಸಾಲಗಳ ಚಕ್ರ ಬಡ್ಡಿ ಮನ್ನಾ ಮಾಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ಈಗಾಗಲೇ ಘೋಷಿಸಿದ ಪರಿಹಾರ ಪ್ಯಾಕೇಜುಗಳನ್ನು ಮತ್ತಷ್ಟು ಪೂರೈಸಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ಶುಕ್ರವಾರ ಸಲ್ಲಿಸಿದ ಪ್ರತ್ಯೇಕ ಅಫಿಡವಿಟ್ನಲ್ಲಿ ತಿಳಿಸಿದೆ. ಅರ್ಜಿದಾರರಿಂದ ಯಾವುದೇ ನ್ಯಾಯಾಂಗ ಪರಿಶೀಲನೆಗೆ ಅನುಮತಿ ನೀಡಬಾರದೆಂದು ಕೋರಲಾಗಿದೆ.

ನ್ಯಾಯಾಲಯ ಮಂಗಳವಾರ ತೀರ್ಪು ನೀಡಲು ಸಜ್ಜಾಗಿದೆ. ಸುಪ್ರೀಂಕೋರ್ಟ್ ನೀಡಲಿರುವ ತೀರ್ಪು ಸಾಲಗಾರರಿಗೆ ಮಾತ್ರವಲ್ಲ, ಬ್ಯಾಂಕುಗಳು ಮತ್ತು ದೇಶದ ಮೇಲೆಯೂ ದೂರದೃಷ್ಟಿ ಪರಿಣಾಮ ಉಂಟುಮಾಡಬಹುದು  ಎಂದು ಹೇಳಲಾಗಿದೆ.

ಕೊರೋನಾ ಲಾಕ್ ಡೌನ್ ಕಾರಣದಿಂದ ಸಾಲದ ಕಂತು ಪಾವತಿಗೆ ಆರು ತಿಂಗಳು ಅವಕಾಶ ನೀಡಲಾಗಿತ್ತು. ಈ ಮೊರಾಟೋರಿಯಂ ಅವಧಿಯಲ್ಲಿ ಚಕ್ರಬಡ್ಡಿ ವಿಧಿಸಿದ್ದು ಅದನ್ನು ಮನ್ನಾ ಮಾಡಲಾಗುವುದು ಎಂದು ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...