ಪೆನ್ಸಿಲ್ವೇನಿಯಾ: ಗಂಡು ಹಾಗೂ ಹೆಣ್ಣು ಎರಡೂ ಆಗಿರುವ ಅತಿ ಅಪರೂಪದ ದ್ವಿಲಿಂಗಿ ಪಕ್ಷಿಯೊಂದನ್ನು ಪೆನ್ಸಿಲ್ವೇನಿಯಾದ ಜೀವ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ರೋಸ್ ಬ್ರೆಸ್ಟೆಡ್ ಗ್ರಾಸ್ ಬೇಕ್ ಎಂದು ಕರೆಯುವ ಈ ಪಕ್ಷಿಗಳು ಪೆನ್ಸಿಲ್ವೇನಿಯಾದ ಪೌಡರ್ ಮಿಲ್ ಪರಿಸರ ಸಂರಕ್ಷಿತ ತಾಣದಲ್ಲಿ ಪತ್ತೆಯಾಗಿದೆ. ಇದರ ಬಲ ಬದಿಗೆ ಗಂಡು ಹಕ್ಕಿಗೆ ಇರುವ ಜನನಾಂಗ ಸೇರಿ ಎಲ್ಲ ಅಂಗ ಲಕ್ಷಣಗಳು ಇವೆ. ಎಡಗಡೆ ಹೆಣ್ಣು ಹಕ್ಕಿಗೆ ಇರುವ ಲಕ್ಷಣಗಳು ಹಾಗೂ ಅಂಗಾಂಗಗಳು ಇವೆ ಎಂದು ಜೀವ ವಿಜ್ಞಾನಿಗಳು ತಿಳಿಸಿದ್ದಾರೆ.
ಕೇವಲ 1 ವರ್ಷದ ಪಕ್ಷಿ ಇದಾಗಿದ್ದು, ದೊಡ್ಡದಾದ ನಂತರ ದ್ವಿಲಿಂಗದ ಎಲ್ಲ ಲಕ್ಷಣಗಳನ್ನೂ ಹೊಂದಲಿದೆ ಎಂದು ಜೀವ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇಡಿ ಜಗತ್ತಿನಲ್ಲಿ ಇಂಥ 10 ಹಕ್ಕಿಗಳು ಮಾತ್ರ ಪತ್ತೆಯಾಗಿವೆ. ಪೆನ್ಸಲ್ವೇನಿಯಾದಲ್ಲಿ ಪತ್ತೆಯಾದ ಹಕ್ಕಿಯ ಗಂಡು ಭಾಗಕ್ಕೆ ನೀಲಿ ಗರಿ ಮೇಲೆ ಕಪ್ಪುಚುಕ್ಕೆಗಳಿವೆ. ಹೆಣ್ಣು ಹಕ್ಕಿಯ ಭಾಗದಲ್ಲಿ ಹಳದಿ ಗರಿಗಳ ಮೇಲೆ ಕಪ್ಪು ಚುಕ್ಕಿಗಳಿವೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.
https://www.facebook.com/PowdermillNatureReserve/posts/3156596877772436