ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ರಾಜಪ್ರಭುತ್ವ ಕೊನೆಗೊಂಡಿದೆ. ಕೆಲವೆಡೆ ರಾಜ ಪ್ರಭುತ್ವ ಇದ್ದರೂ ಅದು ಹೆಸರಿಗೆ ಮಾತ್ರ ಎಂಬಂತಿದೆ. ಆದರೆ, ರಿಪಬ್ಲಿಕ್ ಆಫ್ ಸೌತ್ ಆಫ್ರಿಕಾ ಹಾಗೂ ಮೊಜಾಂಬಿಕ್ ನಲ್ಲಿರುವ ಸಣ್ಣ ದೇಶ ಇ ಸ್ವಾತಿನಿ ಸಂಪೂರ್ಣ ರಾಜ ಪ್ರಭುತ್ವ ಹೊಂದಿದೆ.
ಮೊದಲು ಸ್ವಾಜಿಲ್ಯಾಂಡ್ ಎಂದು ಕರೆಯುತ್ತಿದ್ದ ಈ ದೇಶದಲ್ಲಿ ರಾಜ ಮಾಸ್ವತಿ-3 ಅಧಿಕಾರದಲ್ಲಿದ್ದಾನೆ. ಸ್ವಾಜಿ ಸಂಸ್ಕೃತಿಯಂತೆ ಕನ್ಯತ್ವ ನಾಶವಾಗದ ಯುವತಿಯನ್ನು ರಾಜ ಪ್ರತಿ ವರ್ಷ ಮದುವೆಯಾಗುತ್ತಾನೆ. ಆಕೆಯ ಆಯ್ಕೆಯನ್ನು ರಾಜಮಾತೆ ನಡೆಸುತ್ತಾಳೆ.
ವಿಚಿತ್ರ ಎಂದರೆ ಪ್ರತಿ ವರ್ಷ ರಾಜ ಮದುವೆಯಾಗುವ ವಧುವಿನ ಕನ್ಯತ್ವ ಪರೀಕ್ಷೆಗಾಗಿಯೇ ರಾಜ ಮಾತೆಯ ಅರಮನೆಯ ಸಮೀಪ ಕ್ಯಾಂಪ್ ಒಂದು ನಡೆಯುತ್ತದೆ. ಅಲ್ಲಿ ನೂರಾರು ಯುವತಿಯರು ಭಾಗವಹಿಸಿ ರಾಜಮಾತೆಯ ಸೇವೆ ಮಾಡುತ್ತಾರೆ. ಆಯ್ಕೆಯಾದ ಕನ್ಯೆಯನ್ನು 1940 ರಿಂದ ನಡೆದು ಬಂದ ದಿನಾಂಕದಂದು ನಡೆಯುವ ವಾರ್ಷಿಕ ಸಮಾರಂಭದಲ್ಲಿ ರಾಜ ವರಿಸುತ್ತಾನೆ. ಅದರಲ್ಲಿ ಸಾವಿರಾರು ಜನ ಸೇರುತ್ತಾರೆ.
ಮಾಸ್ವತಿ-3 ತನ್ನ 18 ನೇ ವಯಸ್ಸಿನಿಂದ ದೇಶದ ಯುವರಾಜನಾದ ಆಗಿನಿಂದಲೇ ಆತ ಮದುವೆಯಾಗುತ್ತಿದ್ದಾನೆ. 1986 ರಿಂದ ರಾಜನಾದ ಆತ ಇದುವರೆಗೆ ಮೂರು ಪತ್ನಿಯರಿಗೆ ವಿಚ್ಛೇದನ ನೀಡಿದ್ದಾನೆ.