ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವ ಮೂಲಕ ಮತ್ತಷ್ಟು ಮನೆ ಮಾತಾದರು. ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ತಮಿಳು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ತಮಿಳು ನಟ ಕಾರ್ತಿ ಜೊತೆ ಸುಲ್ತಾನ್ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಕಾಲಿವುಡ್ಗೆ ಪ್ರವೇಶ ಮಾಡಿದ್ದಾರೆ.
ಕಳೆದ ವರ್ಷ ಆರಂಭವಾಗಿದ್ದ ಈ ಚಿತ್ರದ ಶೂಟಿಂಗ್ ಕೊರೊನಾದಿಂದಾಗಿ ಸ್ಥಗಿತಗೊಂಡಿತ್ತು. ಆದರೆ ಲಾಕ್ಡೌನ್ ಅನ್ಲಾಕ್ ಆಗಿದ್ದರಿಂದ ಕೊನೆಗೂ ಚಿತ್ರೀಕರಣ ಮುಗಿದಿದೆ. ಇದರ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಖುಷಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಈ ಸಿನಿಮಾ ಶೂಟಿಂಗ್ ಮುಗಿದಿದೆ. ನಾನು ಕೆಲಸ ಮಾಡಿದ ಅತ್ಯಂತ ಉತ್ತಮ ತಂಡಗಳಲ್ಲಿ ಇದು ಒಂದು. ಅತಿ ಹೆಚ್ಚು ಪ್ರೀತಿ ನೀಡಿದೆ ಸಿನಿಮಾ ತಂಡ. ಈ ಸಿನಿಮಾ ಯಶಸ್ವಿ ಕಾಣುತ್ತೆ ಎಂಬ ನಂಬಿಕೆ ಇದೆ ಎಂದಿದ್ದಾರೆ.
ಈ ಸಿನಿಮಾವನ್ನು ರೆಮೊ ಸಿನಿಮಾ ಖ್ಯಾತಿಯ ನಿರ್ದೇಶಕ ಬಕ್ಕಿಯಾರಾಜ್ ಕಣ್ಣನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಯೋಗಿಬಾಬು, ಪೊಣ್ಣಂಬಾಲನ್ ನಟಿಸಿದ್ದಾರೆ. ವಿವೇಕ್ ಮತ್ತು ಮರ್ವಿನ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.
https://www.instagram.com/p/CGEjJhip1gB/?utm_source=ig_web_copy_link