ಇಡೀ ಜಗತ್ತು ಪ್ರಸ್ತುತ ಕೊರೊನಾ ಸೋಂಕಿನಿಂದ ಬಳಲುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಆದ್ಯತೆ ನೀಡಿವೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡ್ತಿದ್ದಾರೆ. ಆದ್ರೆ ವಿಶ್ವದ ಅತಿ ದೊಡ್ಡ ಆನ್ಲೈನ್ ವೃತಿಪರ ನೆಟ್ವರ್ಕ್ ಆಘಾತಕಾರಿ ವರದಿಯೊಂದನ್ನ ಬಿಡುಗಡೆ ಮಾಡಿದೆ.
ಈ ವರದಿಯ ಪ್ರಕಾರ ಭಾರತದಲ್ಲಿ ಮನೆಯಿಂದಲೇ ಕೆಲಸ ಮಾಡುವ ಮೂವರಲ್ಲಿ ಒಬ್ಬರ ವೃತ್ತಿ ಬೆಳವಣಿಗೆಗೆ ಹಾನಿಯಾಗುತ್ತಿದೆಯಂತೆ. ಅಷ್ಟೆ ಅಲ್ಲ ವರ್ಕ್ಫ್ರಮ್ ಹೋಮ್ ಮಾಡುವುದರಿಂದ ಕೆಲಸ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬಿರುತ್ತಿದೆಯಂತೆ.
ಇನ್ನೂ ಮನೆಯಿಂದಲೇ ಕೆಲಸ ಮಾಡುವ ಕಾರಣ ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳಿವೆ. ಈ ಕೊರೊನಾ ಸಮಯದಲ್ಲಿ, 40 ಪ್ರತಿಶತ ವೃತ್ತಿಪರರು ಮನೆಯಿಂದ ಕೆಲಸ ಮಾಡುವುದರಿಂದ, ಅವರು ಹೆಚ್ಚು ಒತ್ತಡ ಅಥವಾ ಆತಂಕವನ್ನು ಎದುರಿಸುತ್ತಿದ್ದಾರೆ. ವರ್ಕ್ಫ್ರಮ್ ಹೋಮ್ ಕೆಲಸ ಮಾಡುವ ಐವರಲ್ಲಿ ಒಬ್ಬರು ಡಿಪ್ರೇಶನ್ಗೆ ಒಳಗಾಗುತ್ತಿದ್ದಾರೆ. ಇನ್ನೂ ವರ್ಕ್ಫ್ರಮ್ ಹೋಮ್ ಮಾಡುವವರಿಗೆ ರಜೆಯ ಸಮಸ್ಯೆ ಕಾಡ್ತಿದೆಯಂತೆ. ಜನರ ರಜೆಯನ್ನು ಇದು ತಿಂದು ಹಾಕಿದೆಯಂತೆ.
ಅಷ್ಟೆ ಅಲ್ಲ ಜನರು ಈ ರೀತಿಯ ಕೆಲಸದಿಂದ ಆರ್ಥಿಕ ಸಮಸ್ಯೆ, ಕೆಲಸದಲ್ಲಿ ಯಾವುದೇ ರೀತಿಯ ಪ್ರಗತಿ ಇಲ್ಲದೇ ಇರುವ ಸಮಸ್ಯೆ ಎದರಿಸುತ್ತಿದ್ದಾರೆ. ಮನೆಯಲ್ಲಿ ಒಬ್ಬರೇ ಕೆಲಸ ಮಾಡುವುದರಿಂದ ಏಕಾಂಗಿತನವೂ ಜನರಿಗೆ ಕಾಡುತ್ತಿದೆ ಅಂತ ಲಿಂಕ್ಡಿನ್ ಸಂಶೋಧನೆ ಹೇಳಿದೆ.