ನವದೆಹಲಿ: ಬ್ಲಾಕ್ ಮನಿ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಮತ್ತೊಂದು ಜಯ ಸಿಕ್ಕಿದೆ. ಸ್ವಿಸ್ ಬ್ಯಾಂಕ್ ಖಾತೆದಾರರ ಎರಡನೇ ಪಟ್ಟಿಯನ್ನು ಭಾರತಕ್ಕೆ ನೀಡಲಾಗಿದೆ.
ಈ ಮೂಲಕ ಕಪ್ಪುಹಣದ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟಿರುವ ಭಾರತೀಯ ವ್ಯಕ್ತಿಗಳು ಮತ್ತು ಕಂಪನಿಗಳ ಎರಡನೇ ಪಟ್ಟಿಯನ್ನು ಸರ್ಕಾರ ಭಾರತಕ್ಕೆ ನೀಡಿದೆ.
ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಸ್ವಿಜರ್ ಲೆಂಡ್ ಸರ್ಕಾರದೊಂದಿಗೆ ಎರಡು ವರ್ಷದ ಹಿಂದೆ ಭಾರತ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. 2019ರ ಸೆಪ್ಟೆಂಬರ್ ನಲ್ಲಿ ಮೊದಲ ಪಟ್ಟಿಯನ್ನು ನೀಡಲಾಗಿತ್ತು.
31 ಲಕ್ಷ ಖಾತೆಗಳ ಮಾಹಿತಿಯನ್ನು ಭಾರತ ಸೇರಿ 75 ದೇಶಗಳಿಗೆ ನೀಡಲಾಗಿದ್ದು ಈಗ ಎರಡನೇ ಪಟ್ಟಿಯನ್ನು 86 ದೇಶಗಳಿಗೆ ನೀಡಲಾಗಿದೆ. ಸ್ವಿಜರ್ ಲೆಂಡ್ ಕೇಂದ್ರೀಯ ತೆರಿಗೆ ಆಡಳಿತ ಕಾಳಧನಿಕರ ಪಟ್ಟಿ ನೀಡಿದ್ದು ನಿರ್ದಿಷ್ಟವಾಗಿ ಯಾವುದೇ ದೇಶದ ಹೆಸರನ್ನು ನಮೂದಿಸಿಲ್ಲ ಗೌಪ್ಯತೆ ಕಾಯ್ದುಕೊಂಡು ಪಟ್ಟಿ ನೀಡಲಾಗಿದೆ ಎಂದು ಹೇಳಲಾಗಿದೆ.
ಕಪ್ಪು ಹಣ ವಾಪಸ್ ತರುವುದಾಗಿ ಅಧಿಕಾರಕ್ಕೆ ಬಂದಿದ್ದ ಪ್ರಧಾನಿ ಮೋದಿ ವಿರುದ್ಧ ಹಿಂದೆ ತೀವ್ರ ಟೀಕೆ ವ್ಯಕ್ತವಾಗಿತ್ತು. ವಿದೇಶದಿಂದ ಕಪ್ಪುಹಣ ತಂದು ಜನರ ಖಾತೆಗೆ ತಲಾ 15 ಲಕ್ಷ ರೂ. ಹಾಕಲಾಗುತ್ತದೆ ಎಂದೆಲ್ಲಾ ಹೇಳಲಾಗಿತ್ತು. ಇದೆಲ್ಲಾ ಬೆಳವಣಿಗೆಗಳ ನಂತರ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರ ಖಾತೆಗಳ ಕುರಿತಾದ ಮಾಹಿತಿಯನ್ನು ಪಡೆಯುವ ಪ್ರಕ್ರಿಯೆ ನಿರಂತರವಾಗಿ ನಡೆದಿದ್ದು, ಈಗ ಎರಡನೇ ಸಲ ಮಾಹಿತಿ ಪಡೆಯಲಾಗಿದೆ ಎನ್ನಲಾಗಿದೆ.