ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭೂತ ವಿದ್ಯೆ ಶಿಕ್ಷಣವನ್ನು ಕಲಿಸಲಾಗುತ್ತದೆ. ವಿಶ್ವದಲ್ಲಿ ಭೂತ್ ವಿದ್ಯಾ ಕಲಿಸುವ ವಿಶ್ವವಿದ್ಯಾನಿಲಯ ಬಹುಶಃ ಇದೊಂದೆ. ಇಲ್ಲಿ ಕಲಿಸುವ ಭೂತ ಶಿಕ್ಷಣ ದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ವಿದೇಶಗಳಿಂದ ವಿದ್ಯಾರ್ಥಿಗಳು ಇದನ್ನು ಕಲಿಯಲು ಬರ್ತಾರೆ. ಆದ್ರೆ ಈ ಬಾರಿ ಭೂತ ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಿಗೆ ಬೇಸರದ ಸುದ್ದಿಯಿದೆ.
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಈ ವರ್ಷ ಭೂತ ಶಿಕ್ಷಣವನ್ನು ಹೇಳಿಕೊಡಲಾಗ್ತಿಲ್ಲ. ಭೂತ ಶಿಕ್ಷಣ ಸೇರಿದಂತೆ ನಾಲ್ಕು ಕೋರ್ಸ್ ಗಳನ್ನು ಈ ಬಾರಿ ಮುಂದೂಡಲಾಗಿದೆ. ಪಿಪಿಸಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೆಡಿಸಿನ್ ಬಗ್ಗೆ ಅಧ್ಯಯನ ಮಾಡುವ ಮೆಡಿಕಲ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಇದನ್ನು ಕಲಿಸಲಾಗುತ್ತದೆ. ಇದು 6 ತಿಂಗಳ ಕೋರ್ಸ್.
ಅಸಹಜ ಕಾರಣಗಳಿಂದಾಗಿ ಮಾನಸಿಕ ಅಸ್ವಸ್ಥತೆಯುಂಟಾದಲ್ಲಿ ಅಂತವರಿಗೆ ಮಾನಸಿಕ ಚಿಕಿತ್ಸೆಯ ನೀಡುವುದು ಹೇಗೆ ಎನ್ನುವ ಬಗ್ಗೆ ಇಲ್ಲಿ ಕಲಿಸಲಾಗುತ್ತದೆ. ಈ ವರ್ಷ 11 ಮಂದಿ ಕೋರ್ಸ್ ಗೆ ಅರ್ಜಿ ಸಲ್ಲಿಸಿದ್ದರಂತೆ. ಪಿಪಿಸಿ ಸಭೆ ನಂತ್ರ ಕೋರ್ಸ್ ರದ್ದು ಮಾಡಲು ನಿರ್ಧರಿಸಲಾಗಿದೆ. ಕೋರ್ಸ್ ಮುಂದೂಡಲು ಕೊರೊನಾ ಮುಖ್ಯ ಕಾರಣವಾಗಿದೆ.