
ಉತ್ತರ ಪ್ರದೇಶದ ಬಂಡಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಅಕ್ರಮ ಸಂಬಂಧದ ವಿಷ್ಯಕ್ಕೆ ಪತ್ನಿ ಜೊತೆ ಜಗಳ ಮಾಡಿದ ಪತಿ ನಂತ್ರ ಆಕೆ ಕತ್ತು ಕತ್ತರಿಸಿದ್ದಾನೆ. ನಂತ್ರ ಕತ್ತು ಹಿಡಿದು ಪೊಲೀಸ್ ಠಾಣೆಗೆ ಹೋದ ಪತಿ, ಪೊಲೀಸರಿಗೆ ಶರಣಾಗಿದ್ದಾನೆ.
ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಆರೋಪಿ ಪೊಲೀಸ್ ಠಾಣೆಗೆ ಬರ್ತಿದ್ದಂತೆ ಪೊಲೀಸರು ದಂಗಾಗಿದ್ದಾರೆ. ವಿಷ್ಯ ತಿಳಿದ ಜನರು ಮನೆ ಮುಂದೆ ಜಮಾಯಿಸಿದ್ದರು. ಇದ್ರ ವಿಡಿಯೋ ಮಾಡಿದ ವ್ಯಕ್ತಿಯೊಬ್ಬ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ.
ಚಿನ್ನಾರ್ ಯಾದವ್ ಮತ್ತು ಪತ್ನಿ ವಿಮಲಾ ಮಧ್ಯೆ ಗಲಾಟೆ ನಡೆದಿದೆ. ಅಕ್ರಮ ಸಂಬಂಧ ವಿಷ್ಯಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಕೋಪಗೊಂಡ ಚಿನ್ನಾರ್, ಪತ್ನಿ ಕತ್ತು ಕತ್ತರಿಸಿದ್ದಾನೆ. ನಂತ್ರ ಪೊಲೀಸರಿಗೆ ಶರಣಾಗಿದ್ದಾನೆ. ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಪತ್ನಿ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅವಳು ತಪ್ಪು ಮಾಡಿದ್ದ ಕಾರಣ ಶಿಕ್ಷೆ ನೀಡಿದ್ದೇನೆಂದು ಚಿನ್ನಾರ್ ಹೇಳಿದ್ದಾನೆ.