ವಿದ್ಯಾವಂತ ವ್ಯಕ್ತಿ ಅಪರಾಧ ಮಾಡುವ ಮೊದಲು ಹಲವು ಬಾರಿ ಯೋಚಿಸುತ್ತಾನೆ ಎಂಬ ನಂಬಿಕೆಯಿದೆ. ಆದರೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ, ಅಪರಾಧ ವರದಿ ವಿಭಿನ್ನ ಅಂಕಿ ಅಂಶಗಳನ್ನು ಪ್ರಸ್ತುತ ಪಡಿಸುತ್ತಿದೆ. ಅದ್ರ ವರದಿ ಈ ನಂಬಿಕೆ ತಪ್ಪು ಎನ್ನುವಂತಿದೆ.
ವರದಿಯ ಪ್ರಕಾರ, ವಿದ್ಯಾವಂತರೇ ಅಪರಾಧ ಮಾಡಿ ಜೈಲು ಸೇರಿದ್ದಾರೆ. ಹೆಚ್ಚು ವಿದ್ಯಾವಂತ ಕೈದಿಗಳು ಉತ್ತರ ಪ್ರದೇಶದ ಜೈಲಿನಲ್ಲಿದ್ದಾರೆ. ಅದ್ರಲ್ಲಿ ಹೆಚ್ಚಿನವರು ಎಂಜಿನಿಯರ್‌ಗಳು ಮತ್ತು ಸ್ನಾತಕೋತ್ತರ ಪದವೀಧರರು. ಉತ್ತರ ಪ್ರದೇಶದ ನಂತ್ರ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲೂ ವಿದ್ಯಾವಂತರು ಜೈಲಿನಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಮೂರನೇ ಸ್ಥಾನದಲ್ಲಿದೆ.
ಭಾರತದ ಜೈಲುಗಳಲ್ಲಿ ತಾಂತ್ರಿಕ ಪದವಿ ಪಡೆದ ಸುಮಾರು 3,740 ಮಂದಿ ಜೈಲಿನಲ್ಲಿದ್ದಾರೆ. ಇವುಗಳಲ್ಲಿ ಹೆಚ್ಚಿನವರು ಯುಪಿ ಜೈಲಿನಲ್ಲಿದ್ದಾರೆ. ಉತ್ತರ ಪ್ರದೇಶ ಜೈಲಿನಲ್ಲಿ 727 ಕೈದಿಗಳು ತಾಂತ್ರಿಕ ಪದವಿ ಪಡೆದಿದ್ದಾರೆ. ಇದರ ನಂತರ ಮಹಾರಾಷ್ಟ್ರದಲ್ಲಿ 495 ಕೈದಿಗಳು ಮತ್ತು ಕರ್ನಾಟಕದ 362 ಕೈದಿಗಳು ತಾಂತ್ರಿಕ ಪದವಿ ಪಡೆದಿದ್ದಾರೆ. ಭಾರತೀಯ ಜೈಲುಗಳಲ್ಲಿರುವ 5282 ಕೈದಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈ ಪೈಕಿ 2010 ಕೈದಿಗಳು ಉತ್ತರ ಪ್ರದೇಶದ ಜೈಲುಗಳಲ್ಲಿದ್ದಾರೆ.
ತಾಂತ್ರಿಕ ಪದವಿ ಪಡೆದ ಹೆಚ್ಚಿನ ಕೈದಿಗಳ ವಿರುದ್ಧ ವರದಕ್ಷಿಣೆ, ಕೊಲೆ, ಅತ್ಯಾಚಾರ ಪ್ರಕರಣವಿದೆ. ವಿದ್ಯಾವಂತ ಕೈದಿಗಳು ಬೇರೆಯವರಿಗೆ ತರಬೇತಿ ನೀಡುತ್ತಾರೆ. ತಾಂತ್ರಿಕ ಪದವಿ ಪಡೆದ ಕೈದಿಗಳೇ ಜೈಲನ್ನು ಇ-ಜೈಲಿನ ಸಂಕೀರ್ಣಕ್ಕೆ ತರಲು ನೆರವಾಗಿದ್ದಾರಂತೆ.