ಧಾರವಾಡ: ರೈತರಿಗೆ ಬರಬೇಕಿರುವ ಬೆಳೆ ವಿಮೆ ಹಣ ಬಿಡುಗಡೆ ಮಾಡಲು ವಿಮೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016 ರಿಂದ ಬರಬೇಕಿರುವ ಬೆಳೆ ವಿಮೆ ಹಣ ಬಿಡುಗಡೆಗೆ ವಿಮೆ ಕಂಪನಿಗಳಿಗೆ ಸೂಚಿಸಲಾಗಿದೆ. ವಿಮೆ ಕಂಪನಿಗಳು ಬಾಕಿ ಉಳಿದ ಹಣವನ್ನು ಸಂದಾಯ ಮಾಡಲು ಒಪ್ಪಿವೆ ಎಂದು ಹೇಳಿದ್ದಾರೆ. ಈ ಸಲ ಬೆಳೆ ಸಮೀಕ್ಷೆ ಪೂರ್ಣವಾಗಿದ್ದು, ರೈತರಿಂದಲೇ ಸಮೀಕ್ಷೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದು ಮತ್ತೊಮ್ಮೆ ಸಮೀಕ್ಷೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.