ಮಾರಕ ರೋಗ ಕೊರೊನಾ ಶುರುವಾಗಿದ್ದೆ ಚೀನಾದಿಂದ. ಆದ್ರೆ ಈ ದೇಶದ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲ. ಹೆಚ್ಚು ಜನಸಂಖ್ಯೆಯಿರುವ ಈ ದೇಶದ ಕೆಲ ಫೋಟೋಗಳು ಅಲ್ಲಿನ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ.
ಚೀನಾ ರಾಷ್ಟ್ರೀಯ ದಿನದ ಹಿನ್ನಲೆಯಲ್ಲಿ ಅಕ್ಟೋಬರ್ 1 ರಿಂದ 8 ರ ವರೆಗೆ ರಜೆಯಿದೆ. ಈ ಸಂದರ್ಭದಲ್ಲಿ ಚೀನಿ ಪ್ರವಾಸಿಗರು ಕೊರೊನಾ ಮರೆತು ಮಜ ಮಾಡ್ತಿದ್ದಾರೆ. ಈ ವೇಳೆ ಕೊರೊನಾ ನಿಯಂತ್ರಣ ಮಾರ್ಗಸೂಚಿಗಳನ್ನು ಇವರು ಉಲ್ಲಂಘಿಸುತ್ತಿದ್ದಾರೆ.
ಕೊರೊನಾ ವೈರಸ್ ನಂತ್ರ ಇದೇ ಮೊದಲ ಬಾರಿ ಸಾರ್ವಜನಿಕ ರಜೆ ನೀಡಲಾಗಿದೆ. ಈ ಸಂದರ್ಭದಲ್ಲಿ ಜನರು ಎಲ್ಲವನ್ನೂ ಮರೆತಿದ್ದಾರೆ. ಚೀನಾದ ಪ್ರಸಿದ್ಧ ಪ್ರವಾಸಿತಾಣ ಹಾಂಗ್ಶಾನ್ ಪರ್ವತಕ್ಕೆ ಜನರ ದಂಡೆ ಹರಿದು ಬಂದಿದೆ. ಮಾಸ್ಕ್, ಸಾಮಾಜಿಕ ಅಂತರ ಮರೆತು ಜನರು ಎಂಜಾಯ್ ಮಾಡಿದ್ದಾರೆ. ಚೀನಾದ ರಾಷ್ಟ್ರೀಯ ರಜಾದಿನವನ್ನು ಗೋಲ್ಡನ್ ವೀಕ್ ಎಂದೂ ಕರೆಯಲಾಗುತ್ತದೆ. ಇದು ಅಕ್ಟೋಬರ್ 1 ರಿಂದ ಅಕ್ಟೋಬರ್ 8 ರವರೆಗೆ ನಡೆಯುತ್ತದೆ. ಇದು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಸ್ಥಾಪಿಸಿದ ಸಂದರ್ಭದಲ್ಲಿ 1949 ರಲ್ಲಿ ಪ್ರಾರಂಭವಾಯಿತು. ಇದನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
ಗ್ರೇಟ್ ವಾಲ್ ಮತ್ತು ಡಿಸ್ನಿಲ್ಯಾಂಡ್ನಲ್ಲಿ ಕೂಡ ಪ್ರವಾಸಿಗರು ದಂಡು-ದಂಡಾಗಿ ಬರ್ತಿದ್ದಾರೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳು ಚೀನಿ ಪ್ರವಾಸಿಗರಿಂದ ತುಂಬಿದೆ. ರಜೆಯ ಕೊನೆ ದಿನ ಇದ್ರ ಸಂಖ್ಯೆ ಹೆಚ್ಚಾಗಿದ್ದು, ವಿಶೇಷ ರೈಲುಗಳನ್ನು ಬಿಡಲು ಚೀನಾ ಸರ್ಕಾರ ಮುಂದಾಗಿತ್ತು.