ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾದ ಹೊಸ ಯೋಜನೆ ತುಂಬಾ ಉಪಯುಕ್ತವಾಗಿದೆ. ಕಡಿಮೆ ಆದಾಯ ಹೊಂದಿದವರಿಗೆ ಈ ಎಲ್ಐಸಿಯ ಮೈಕ್ರೋ ಇನ್ಶುರೆನ್ಸ್ ಯೋಜನೆ ಹೇಳಿ ಮಾಡಿಸಿದ ಯೋಜನೆ. ಇದು ಮಧ್ಯಮ ಹಾಗೂ ಬಡ ವರ್ಗದವರ ರಕ್ಷಣೆ ಹಾಗೂ ಉಳಿತಾಯದ ಉದ್ದೇಶವನ್ನು ಹೊಂದಿದೆ. ಪಾಲಿಸಿದಾರರೆನಾದರೂ ಆಕಸ್ಮಿಕ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ.
ಮೈಕ್ರೋ ಸೇವಿಂಗ್ಸ್ ಪ್ರೀಮಿಯಂ ಯೋಜನೆಯು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಈ ವಿಮಾ ಯೋಜನೆಯಲ್ಲಿ 50 ಸಾವಿರ ರೂಪಾಯಿಯಿಂದ 2 ಲಕ್ಷದವರೆಗೆ ವಿಮೆ ಲಭ್ಯವಿರುತ್ತದೆ. ಈ ಯೋಜನೆಯಡಿ ಯಾರಾದರೂ 3 ವರ್ಷಗಳ ಕಾಲ ಪ್ರೀಮಿಯಂ ಪಡೆದ್ರೆ, ಅವರು ಮೈಕ್ರೋ ಸೇವಿಂಗ್ಸ್ ಪ್ಲಾನ್ ನಲ್ಲಿ ಸಾಲದ ಸೌಲಭ್ಯವನ್ನು ಪಡೆಯಬಹುದು.
ಈ ವಿಮೆ 18 ರಿಂದ 55 ವರ್ಷದೊಳಗಿನವರಿಗೆ ಮಾತ್ರ ಲಭ್ಯವಿರುತ್ತದೆ. ಇದರ ಅಡಿಯಲ್ಲಿ ಯಾವುದೇ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ. ಯಾರಾದರೂ 3 ವರ್ಷಗಳ ಕಾಲ ನಿರಂತರವಾಗಿ ಪ್ರೀಮಿಯಂ ಪಾವತಿಸಿದರೆ, ಅದರ ನಂತರ ಅವರು ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದರೆ, ಅವರು 6 ತಿಂಗಳವರೆಗೆ ವಿಮಾ ಸೌಲಭ್ಯವನ್ನು ಮುಂದುವರಿಸುತ್ತಾರೆ. ಪ್ರೀಮಿಯಂ ಪಾಲಿಸಿ ಹೊಂದಿರುವವರು 5 ವರ್ಷಗಳ ಕಾಲ ಪ್ರೀಮಿಯಂ ತುಂಬಿದ್ರೆ ಅವರಿಗೆ 2 ವರ್ಷಗಳ ಆಟೋ ಕವರ್ ಸಿಗುತ್ತದೆ. ಈ ಯೋಜನೆಯ ಸಂಖ್ಯೆ 851.
ಮೈಕ್ರೋ ಸೇವಿಂಗ್ಸ್ ವಿಮಾ ಯೋಜನೆಯ ಪಾಲಿಸಿ ಅವಧಿ 10 ರಿಂದ 15 ವರ್ಷಗಳು. ಈ ಯೋಜನೆಯಲ್ಲಿ, ಪ್ರೀಮಿಯಂ ವಾರ್ಷಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಆಧಾರದ ಮೇಲೆ ಪಾವತಿಸಬಹುದು. ಇದರಲ್ಲಿ, ಆಕ್ಸಿಡೆಂಟಲ್ ರೈಡರ್ ಅನ್ನು ಎಲ್ಐಸಿಗೆ ಸೇರಿಸುವ ಸೌಲಭ್ಯವನ್ನೂ ನೀವು ಪಡೆಯುತ್ತೀರಿ. ಆದಾಗ್ಯೂ, ಇದಕ್ಕಾಗಿ ನೀವು ಪ್ರತ್ಯೇಕ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಈ ಯೋಜನೆಯಡಿಲ್ಲಿ, 18 ವರ್ಷ ವಯಸ್ಸಿನವರು, 15 ವರ್ಷದ ಯೋಜನೆಯನ್ನು ತೆಗೆದುಕೊಂಡರೆ, ಆತ ಪ್ರತಿ ಸಾವಿರಕ್ಕೆ 51.5 ರೂಪಾಯಿಗಳ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ 25 ವರ್ಷ ವಯಸ್ಸಿನವರು ಇದೇ ಅವಧಿಗೆ 51.60 ರೂಪಾಯಿ ಮತ್ತು 35 ವರ್ಷ ವಯಸ್ಸಿನವರು ಪ್ರತಿ ಸಾವಿರಕ್ಕೆ 52.20 ರೂಪಾಯಿ, 10 ವರ್ಷದ ಯೋಜನೆಯಲ್ಲಿ ಪ್ರೀಮಿಯಂ ಸಾವಿರಕ್ಕೆ 85.45 ರಿಂದ 91.9 ರೂಪಾಯಿಯಾಗಿರುತ್ತದೆ.
ಪ್ರಸ್ತುತ ಪಾಲಿಸಿಯಲ್ಲಿ ಶೇಕಡಾ 70 ರಷ್ಟು ಸಾಲ ಲಭ್ಯವಿರುತ್ತದೆ. ಒಬ್ಬ ವ್ಯಕ್ತಿಯು ಮುಂದಿನ 15 ವರ್ಷಗಳವರೆಗೆ 35 ನೇ ವಯಸ್ಸಿನಲ್ಲಿ ಈ ಪಾಲಿಸಿಯನ್ನು ತೆಗೆದುಕೊಂಡಿದ್ದರೆ, ಅವನು ವಾರ್ಷಿಕವಾಗಿ 52.20 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅದೇ ರೀತಿ, ಯಾರಾದರೂ ವಿಮೆ ಮೊತ್ತವನ್ನು 2 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡರೆ, ಅವನು 52.20 x 100 x 2 ಅಂದರೆ ವಾರ್ಷಿಕವಾಗಿ 10,300 ಠೇವಣಿ ಇಡಬೇಕಾಗುತ್ತದೆ. ಅಂದರೆ, ನೀವು ಪ್ರತಿದಿನ 28 ರೂಪಾಯಿ ಮತ್ತು 840 ರೂಪಾಯಿ ಪ್ರೀಮಿಯಂ ಪಾವತಿಸಬೇಕು.
ಈ ಅವಧಿಯಲ್ಲಿ, ಸಾಲದ ಮೇಲೆ ಶೇಕಡಾ 10.42 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಪ್ರೀಮಿಯಂ ಪಾವತಿಸಲು 1 ತಿಂಗಳ ರಿಯಾಯಿತಿ ಇರುತ್ತದೆ. ಈ ಪಾಲಿಸಿಯ ಮುಕ್ತಾಯದ ಗರಿಷ್ಠ ವಯಸ್ಸು 70 ವರ್ಷಗಳು.