ಕೊರೊನಾ ಸಾಂಕ್ರಾಮಿಕ ರೋಗ ಗರ್ಭಿಣಿಯರಿಗೆ ಅಪಾಯವೆಂದು ಈಗಾಗಲೇ ಹೇಳಲಾಗಿದೆ. ಈಗ ಡಬ್ಲ್ಯುಎಚ್ ಒ ಮತ್ತೊಂದು ವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದೆ.
ಕೊರೊನಾ ಸಾಂಕ್ರಾಮಿಕ ರೋಗವು ಹೆಚ್ಚಾದರೆ, ಪ್ರತಿ 16 ಸೆಕೆಂಡಿಗೆ ಒಂದು ಸತ್ತ ಮಗು ಜನಿಸುತ್ತದೆ ಎಂದು ಯುನಿಸೆಫ್ ಹೇಳಿದೆ. ಪ್ರತಿವರ್ಷ 2 ದಶಲಕ್ಷಕ್ಕೂ ಹೆಚ್ಚು ಸತ್ತ ಮಗು ಜನಿಸುವ ಪ್ರಕರಣಗಳು ವರದಿಯಾಗುತ್ತವೆ ಎಂದು ಡಬ್ಲ್ಯುಎಚ್ ಒ ಹೇಳಿದೆ.
ವರದಿಯ ಪ್ರಕಾರ, ಈ ಪ್ರಕರಣಗಳಲ್ಲಿ ಹೆಚ್ಚಿನವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವರದಿಯಾಗಲಿದೆಯಂತೆ.
ಡಬ್ಲ್ಯುಎಚ್ಒ, ಗುರುವಾರ ಈ ಬಗ್ಗೆ ವರದಿ ಪ್ರಕಟಿಸಿದೆ. ಪ್ರತಿವರ್ಷ ಸುಮಾರು ಎರಡು ದಶಲಕ್ಷ ಶಿಶುಗಳು ಸತ್ತು ಹುಟ್ಟುತ್ತವೆ. ಈ ಪ್ರಕರಣಗಳು ಹೆಚ್ಚಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ನಡೆಯಲಿದೆ ಎಂದು ವರದಿಯಲ್ಲಿ ಹೇಳಿದೆ.
ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕಿ ಹ್ಯಾನರಿಟಾ ಪ್ರಕಾರ, ಪ್ರತಿ 16 ಸೆಕೆಂಡಿಗೆ ಒಂದರಂತೆ ಸತ್ತ ಮಗು ಜನಿಸುತ್ತದೆ. ಉತ್ತಮ ಮೇಲ್ವಿಚಾರಣೆ, ಪ್ರಸವ ಪೂರ್ವ ಆರೈಕೆ ಮತ್ತು ವೃತ್ತಿಪರ ವೈದ್ಯರ ಸಹಾಯದಿಂದ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದಿದ್ದಾರೆ. ಕೊರೊನಾದಿಂದಾಗಿ ಇದರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಆರೋಗ್ಯ ಸೇವೆಗಳು ಈಗಾಗಲೇ ಹದಗೆಟ್ಟಿರುವುದು ಇದಕ್ಕೆ ಕಾರಣವಾಗಿದೆ.