ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಕುಸಿಯುತ್ತಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಗಳು ಇಳಿಕೆ ಕಂಡಿವೆ. ಎಂಸಿಎಕ್ಸ್ನ ಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ಇಳಿದಿದೆ. ಸತತ ಮೂರನೇ ದಿನ ಚಿನ್ನದ ಬೆಲೆ ಇಳಿದಂತಾಗಿದೆ.
ಆರಂಭಿಕ ವಹಿವಾಟಿನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ 49,971 ರೂಪಾಯಿಗಳಿಗೆ ಇಳಿದಿದೆ. ಬುಧವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 694 ರೂಪಾಯಿ ಇಳಿಕೆ ಕಂಡಿತ್ತು. ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಇಳಿಕೆ ಕಂಡು 50 ಸಾವಿರ ಆಸುಪಾಸಿಗೆ ಬಂದಿದೆ. ಆದ್ರೆ ದೀಪಾವಳಿಯವರೆಗೂ ಚಿನ್ನದ ಬೆಲೆ 50 ಸಾವಿರದ ಆಸುಪಾಸಿನಲ್ಲಿಯೇ ಇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪರಿಹಾರ ಪ್ಯಾಕೇಜ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದ್ರಲ್ಲಿ ಪರಿಹಾರ ಪ್ಯಾಕೇಜ್ ಗೆ ಸಹಿ ಹಾಕುವ ಬಗ್ಗೆ ಹೇಳಿದ್ದಾರೆ. ಟ್ರಂಪ್ ಈ ಟ್ವಿಟ್ ಮಾರುಕಟ್ಟೆಯಲ್ಲಿ ಬದಲಾವಣೆ ತಂದಿದೆ. ಪ್ರಪಂಚದಾದ್ಯಂತದ ಷೇರು ಮಾರುಕಟ್ಟೆಗಳಲ್ಲಿ ಏರಿಕೆ ಕಂಡು ಬಂದಿದೆ. ಕೊರೊನಾ ಸಂದರ್ಭದಲ್ಲಿ ಮೊದಲ ಬಾರಿ ಸೆನ್ಸೆಕ್ಸ್ 400 ಅಂಕಗಳ ಗಡಿ ದಾಟಿದೆ. ಆರಂಭದಲ್ಲಿ 452.15 ಅಂಕ ಏರಿಕೆ ಕಂಡ ಸೆನ್ಸೆಕ್ಸ್ 40,331.10ನಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 117.50 ಪಾಯಿಂಟ್ ಹೆಚ್ಚಳ ಕಂಡು 11,856.35ನಲ್ಲಿ ವಹಿವಾಟು ನಡೆಸುತ್ತಿದೆ.