ಸಾಮಾನ್ಯ ಶೀತಕ್ಕೆ ಕಾರಣವಾಗುತ್ತಿದ್ದ ಕೊರೊನಾ ವೈರಸ್ ಜಾತಿಯ ವೈರಾಣುಗಳ (SARS-CoV-2) ಬಾಧೆಗೆ ತುತ್ತಾಗಿದ್ದ ಜನರಿಗೆ ಕೋವಿಡ್-19 ಸೋಂಕಿನ ತೀವ್ರತೆ ಕಡಿಮೆ ಇರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
Journal of Clinical Investigation ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಅಧ್ಯಯನದ ವರದಿಯಲ್ಲಿ ಈ ಬಗ್ಗೆ ತಿಳಿಸಲಾಗಿದ್ದು, SARS-CoV-2 ಜಾತಿಯ ವೈರಾಣುಗಳಿಂದ ಪೀಡಿತರಾಗಿದ್ದ ಮಂದಿಗೆ ಕೋವಿಡ್-19 ಸೋಂಕಿನ ವಿರುದ್ಧವೇನೂ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುತ್ತದೆ ಎನ್ನಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.
ಕೋವಿಡ್-19 ಚುಚ್ಚುಮದ್ದಿನ ಅಭಿವೃದ್ಧಿಗೆ ನೆರವಾಗಬಲ್ಲ ನಡೆಯೊಂದರಲ್ಲಿ ಈ ಅಂಶ ಪತ್ತೆಯಾಗಿರುವುದು ಗಮನಾರ್ಹವಾಗಿದೆ.