ತಮ್ಮ ನೆಚ್ಚಿನ ನಟನಿಗಾಗಿ ಅವರ ಫ್ಯಾನ್ಸ್ ಗಳು ನಾನಾ ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯೊಬ್ಬರು ಮೊಣಕೈಯಿಂದ ಪುನೀತ್ ರಾಜ್ ಕುಮಾರ್ ಅವರ ಚಿತ್ರ ಬಿಡಿಸಿದ್ದಾರೆ. ಇವರ ಈ ಅದ್ಬುತ ಟ್ಯಾಲೆಂಟ್ ಗೆ ಪುನೀತ್ ರಾಜ್ ಕುಮಾರ್ ಮನಸೋತು ತಮ್ಮ ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕಲೆಗೆ ಬೆಲೆ ಕಟ್ಟೋದಕ್ಕೆ ಆಗಲ್ಲ ನಿಜ, ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋದಕ್ಕೆ ಆಗಲ್ಲ, ಮಾತುಗಳಲ್ಲಿ ಅಂತೂ ಏನು ಹೇಳೋದಕ್ಕೆ ಆಗಲ್ಲ, ತುಂಬಾ ತುಂಬಾ thanks ಎಂದು ಪುನೀತ್ ರಾಜ್ ಕುಮಾರ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.