
ಅನಧಿಕೃತ ಆರೋಗ್ಯ ವಿಮೆ ಏಜೆಂಟರುಗಳಿಂದ ಎಚ್ಚರಿಕೆಯಾಗಿ ಇರುವಂತೆ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ ಆರ್ ಡಿ ಎ ಐ) ಎಚ್ಚರಿಕೆ ನೀಡಿದೆ.
ಕೆಲ ಅನಧಿಕೃತ ವಿಮಾ ಏಜೆಂಟರು, ಆರೋಗ್ಯ ವಿಮೆಯ ಯೋಜನೆಗಳ ದಾರಿ ತಪ್ಪಿಸಿ ಜನರಿಗೆ ತಿಳಿಸುತ್ತಿದ್ದು, ರಿಯಾಯ್ತಿ ದರದಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆ ಎಂಬಿತ್ಯಾದಿ ಸುಳ್ಳು ಹೇಳಿ ವಿಮೆ ಮಾಡಿಸುತ್ತಿರುವುದು ಗಮನಕ್ಕೆ ಬಂದಿದ್ದು, ಎಚ್ಚರದಿಂದ ಇರುವಂತೆ ತಿಳಿಸಿದೆ.
ಐಆರ್ಡಿಎಐನಲ್ಲಿ ನೋಂದಾಯಿಸಿಕೊಂಡು ಮಾನ್ಯತೆ ಪಡೆದ ವಿಮಾ ಸಂಸ್ಥೆಗಳು, ಏಜೆಂಟರ ಮೂಲಕವೇ ಗ್ರಾಹಕರು ವಿಮೆ ಯೋಜನೆಗಳನ್ನು ಖರೀದಿಸಬೇಕು. ಅಧಿಕೃತ ಸಂಸ್ಥೆ ಹಾಗೂ ಏಜೆಂಟರ ಪಟ್ಟಿಯನ್ನು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಆದರೂ ಅನಧಿಕೃತ ಏಜೆಂಟರಿಂದ ವಿಮೆ ಮಾಡಿಸಿ ಮೋಸ ಹೋದರೆ, ಪ್ರಾಧಿಕಾರ ಹೊಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.