ಇಂಗ್ಲೆಂಡ್ ನಲ್ಲಿ ವ್ಯಕ್ತಿಯೊಬ್ಬನ ತಪ್ಪಾದ ತಿಳುವಳಿಕೆಯಿಂದ ಕಣ್ಣಲ್ಲಿ ಕೀಟವೊಂದು ಒಂದು ತಾಸು ಸಿಕ್ಕಿಕೊಂಡಿದ್ದು, ವೈದ್ಯರು ಬಳಿಕ ಅದನ್ನು ಹೊರ ತೆಗೆದಿದ್ದಾರೆ.
ಲೀಸೆಸ್ಟರ್‌ನ ಮೈಕೆಲ್ ತ್ಸಿಕಯಾ ಸೈಕ್ಲಿಂಗ್ ಮಾಡುತ್ತಿದ್ದಾಗ ಅವನ ಕಣ್ಣಿನೊಳಗೆ ಸಣ್ಣ ಕೀಟ ಸೇರಿಕೊಳ್ಳುತ್ತದೆ. ಆದರೆ ಅದು ರೆಪ್ಪೆಗೂದಲು ಅಥವಾ ಧೂಳು ಇರಬಹುದೆಂದು ಆತ ಭಾವಿಸಿ ಮುಂದೆ ಸಾಗುತ್ತಾನೆ.
ಅವನಿಗೆ ಕೆಲ ಕ್ಷಣದಲ್ಲಿ ಕಿರಿಕಿರಿ ಉಂಟಾಗಿ ಉಜ್ಜಲು ಪ್ರಯತ್ನಿಸಿದಾಗ, ಹಠಾತ್ ತೀಕ್ಷ್ಣ ನೋವು ಕಾಣಿಸಿಕೊಂಡಿತು. ನಂತರ ಸಮೀಪದ ಶಾಪಿಂಗ್ ಕೇಂದ್ರದ ಸ್ನಾನಗೃಹದಲ್ಲಿ ಕಣ್ಣು ತೊಳೆದಿದ್ದು ಆದರೆ, ಯಾವುದೇ ಪರಿಹಾರ ಸಿಗಲಿಲ್ಲ.
ಬಳಿಕ ಮನೆಗೆ ಹೋಗಿ ಮನೆಗೆ ಹೋಗಿ ಕನ್ನಡಿಯಲ್ಲಿ ಹತ್ತಿರದಿಂದ ನೋಡಿದಾಗ ಕಣ್ಣಿನ ಮೂಲೆಯಲ್ಲಿ ಕಪ್ಪು ಬಣ್ಣದ ಚುಕ್ಕೆಯ ರೀತಿ ಕಾಣಿಸಿದೆ. ಅದು ರಕ್ತ ಇರಬಹುದೆಂದು ಭಾವಿಸಿ ಕಣ್ಣಿನ ವೈದ್ಯರ ಬಳಿ ಧಾವಿಸಿದ್ದಾನೆ.
ವೈದ್ಯರು ಕಣ್ಣುರೆಪ್ಪೆಯ ಕೆಳಗೆ ಸಿಕ್ಕಿಬಿದ್ದ ಹುಳವನ್ನು ಕಂಡುಕೊಂಡು ಅದನ್ನು ಹೊರತೆಗೆದಿದ್ದಾರೆ.