ಪತ್ನಿ ಮುನಿಸಿಕೊಂಡು ಮಾತು ಬಿಟ್ಟರೆ ಆಕೆಯನ್ನು ಒಲಿಸಲು ಪತಿ ಮಾಡುವ ಸಾಹಸ ಒಂದೆರಡಲ್ಲ. ಇಲ್ಲಿಯೂ ಒಬ್ಬ, ಪತ್ನಿ ತನ್ನ ಜತೆ ಮಾತನಾಡಲಿ ಎಂದು ಮಾಡಿರುವ ಉಪಾಯಗಳನ್ನು ನೋಡಿ ನೆಟ್ಟಿಗರು ದಂಗಾಗಿದ್ದಾರೆ.
ಪತಿಯು ಪತ್ನಿ ತನ್ನ ಜತೆ ಮಾತನಾಡುವಂತೆ ಮಾಡಲು ಮಾಡಿದ ಖತರ್ನಾಕ್ ಐಡಿಯಾಗಳ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಆತ ಮಾಡಿದ ಕಾರ್ಯಗಳಿಂದ ಆತನ ಪತ್ನಿ ಮಾತನಾಡಿದಳೋ ಅಥವಾ ಮತ್ತಷ್ಟು ಮುನಿಸಿಕೊಂಡು ಮಹಾಕಾಳಿಯಾದಳೋ ಎಂಬುದು ಗೊತ್ತಿಲ್ಲ.
ಆದರೆ, ಆತ ಮಾಡಿದ ವಿಡಿಯೋ ಸಖತ್ ವೈರಲ್ ಆಗಿಬಿಟ್ಟಿದೆ. ಒಟ್ಟು 13 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಸಾಕಷ್ಟು ಪುರುಷರು ಆತನ ಬೆಂಬಲಕ್ಕೆ ಬಂದಿದ್ದು, ತಮ್ಮ ಅನುಭವಗಳನ್ನು ಕಮೆಂಟಿಸಿದ್ದಾರೆ.
ಪತಿ ಟಾಯ್ಲೆಟ್ನ ನೀರಿನ ಪೈಪ್ ಬಂದ್ ಮಾಡುತ್ತಾನೆ. ಟಾಯ್ಲೆಟ್ ಪೇಪರ್ಗಳನ್ನು ಅಡಗಿಸಿಡುತ್ತಾನೆ. ಬಲ್ಬ್ ಕಳಚಿಡುತ್ತಾನೆ. ಟಿವಿ ರಿಮೋಟ್ನ ಸೆಲ್ಗಳನ್ನು ತಿರುಗುಮುರುಗಲಾಗಿ ಹಾಕಿ ತಾಗದಂತೆ ನಾಡುತ್ತಾನೆ. ಕಾರಿನ ಟಯರ್ ಗಾಳಿ ಬಿಡುತ್ತಾನೆ. ಆಕೆಯ ಫೋನ್ ಸೆಟ್ಟಿಂಗ್ ಬದಲಿಸುತ್ತಾನೆ. ಕಾಫಿ ಮೇಕರ್ ಭಾಷೆ ಬದಲಿಸಿ ಫ್ರೆಂಚ್ ಭಾಷೆ ಆಯ್ಕೆ ಮಾಡಿಡುತ್ತಾನೆ. ವೈಫೈ ಸಂಪರ್ಕ ತಪ್ಪಿಸಿಡುತ್ತಾನೆ.
ಇದೆಲ್ಲ ಹಾಳಾಗಿದೆ ರಿಪೇರಿ ಮಾಡಿಕೊಡು ಎಂದಾದರೂ ಸಹಾಯ ಕೇಳಿಕೊಂಡು ಪತ್ನಿ ತನ್ನ ಜತೆ ಮಾತನಾಡಬಹುದು ಎಂಬುದು ಆತನ ಆಸೆ. ಆದರೆ, ಆತ ಮಾಡಿದ ಕಿಲಾಡಿಗೆ ಪತ್ನಿ ಕೆಂಡಾಮಂಡಲಳಾಗಿರಲಿಕ್ಕೂ ಸಾಕು.
https://www.youtube.com/watch?v=7hjJY8uNET4&feature=emb_logo