ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಉತ್ತರ ಪ್ರದೇಶದ ಹತ್ರಾಸ್‌ನ ಟೀನೇಜರ್ ಕೊಲೆ ಪ್ರಕರಣವು ದಿನಕ್ಕೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಸೆಪ್ಟೆಂಬರ್ 14ರಂದು ಅತ್ಯಾಚಾರಕ್ಕೊಳಗಾಗಿದ್ದ ಈ ಹುಡುಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಹುಡುಗಿಯ ಈ ಸಾವಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದೇ ವೇಳೆ, ಆಕೆಯ ಗುರುತಿನ ಸಂಬಂಧ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವೆಲ್ಲಾ ಸುಳ್ಳು ಎಂದು ವರದಿಗಳು ತಿಳಿಸುತ್ತಿವೆ.
ಮೊಟ್ಟ ಮೊದಲಿಗೆ, ಭಾರತೀಯ ದಂಡ ಸಂಹಿತೆಯ 228ಎ ವಿಧಿ ಅನುಸಾರ ಅತ್ಯಾಚಾರ ಸಂತ್ರಸ್ತೆ ಎನ್ನಲಾದ ವ್ಯಕ್ತಿಯ ಹೆಸರು ಅಥವಾ ಚಿತ್ರವನ್ನು ಬಹಿರಂಗ ಮಾಡುವುದು ಅಪರಾಧವಾಗಿದೆ. ಇಷ್ಟಿದ್ದೂ ಸಹ, ಹತ್ರಾಸ್ ಘಟನೆ ಸಂಬಂಧ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡುತ್ತಿವೆ.
ಇವೇ ಫೇಕ್ ಚಿತ್ರಗಳನ್ನು ದೊಡ್ಡ ದೊಡ್ಡ ಸಲೆಬ್ರಿಟಿಗಳೂ ಸಹ ಸಾಮಾಜಿಕ ಜಾಲತಾಣಗಳ ತಂತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆದರೆ ಖುದ್ದು ಸಂತ್ರಸ್ತೆಯ ಸಹೋದರ ಹೇಳುವ ಪ್ರಕಾರ ಈ ಫೋಟೋ, ವಿಡಿಯೋ ನಕಲಿಯಾಗಿವೆ.
https://www.facebook.com/ajayyadav.jeetu/posts/2955717021199603