ಈಗಂತೂ ಬಹುತೇಕ ಸೇವೆಗಳಿಗೆ ಆಧಾರ್ ಅನಿವಾರ್ಯವಾಗಿದೆ. ಸರ್ಕಾರದ ಯೋಜನೆ, ಸಬ್ಸಿಡಿ ಲಾಭ ಪಡೆಯಲು ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಎಲ್ಲ ಕೆಲಸಕ್ಕೂ ನೀವು ಅಂಚೆ ಕಚೇರಿ ಮೂಲಕ ಪಡೆದ ಆಧಾರ್ ಕಾರ್ಡ್ ನೀಡಬೇಕಾಗಿಲ್ಲ. ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಂಡ ಡಿಜಿಟಲ್ ಆಧಾರ್ ಕಾರ್ಡನ್ನು ಕೂಡ ನೀವು ನೀಡಬಹುದು. ಇದು ಬಹಳ ಸುಲಭ.
ಮೊದಲಿಗೆ ಯುಐಡಿಎಐನ ಅಧಿಕೃತ ವೆಬ್ಸೈಟ್ https://eaadhaar.in uidai.gov.in ಗೆ ಲಾಗಿನ್ ಆಗಬೇಕು. ನಂತ್ರ ʼGet Aadhaar’ ಗೆ ಹೋಗಿ ಅಲ್ಲಿ ‘Download Aadhaar’ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತ್ರ ಹೊಸ ಪುಟ ತೆರೆಯಬೇಕು. ಇದರಲ್ಲಿ ಆಧಾರ್ ಸಂಖ್ಯೆ, ನೋಂದಣಿ ಸಂಖ್ಯೆ ಅಥವಾ ವರ್ಚುವಲ್ ಸಂಖ್ಯೆಯನ್ನು ನಮೂದಿಸಬೇಕು. ಕ್ಯಾಪ್ಚಾ ಕೋಡ್ ನಮೂದಿಸಬೇಕು. ನಂತ್ರ ಸೆಂಡ್ ಒಟಿಪಿ ಕ್ಲಿಕ್ ಮಾಡಬೇಕು.
ನಿಮ್ಮ ನೋಂದಾಯಿತ ಮೊಬೈಲ್ ಗೆ 6 ಅಂಕೆಯ ಒಟಿಪಿ ಬರುತ್ತದೆ. ಅದನ್ನು ಹಾಕಿ, ಕೆಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ವೆರಿಫೈ ಮತ್ತು ಡೌನ್ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಆಗ ಡಿಜಿಟಲ್ ಆಧಾರ್ ಡೌನ್ಲೋಡ್ ಆಗುತ್ತದೆ.