ಕೊರೊನಾ ವೈರಸ್ ಹೆಚ್ಚಾಗಿ ಗಾಳಿಯ ಮೂಲಕ ಹರಡುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಮ್ಮುವಾಗ ಅಥವಾ ಸೀನುವಾಗ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿವೆ. ಆದರೆ ಮಾತನಾಡುವಾಗ ಈ ವೈರಸ್ ಅಷ್ಟಾಗಿ ಹರಡುವುದಿಲ್ಲ.
ಈ ವೈರಸ್ ಕಣ್ಣಿಗೆ ಕಾಣದಿರುವುದರಿಂದ ಗಾಳಿಯಲ್ಲಿ ಎಲ್ಲೆಲ್ಲಿ ಇರುತ್ತೆ ಎಂಬುದನ್ನು ಹೇಳೋದು ಕಷ್ಟ. ಈ ಕೊರೊನಾ ನಮ್ಮ ಕೂದಲಿಗಿಂತಲೂ 400 ಪಟ್ಟು ಚಿಕ್ಕದಾಗಿರುತ್ತೆ ಅಂದ್ರೆ ಈ ವೈರಸ್ ಎಷ್ಟು ಸೂಕ್ಷ್ಮವಾಗಿರುತ್ತೆ ಎಂಬುದನ್ನು ನಾವೆಲ್ಲರೂ ಗೆಸ್ ಮಾಡ್ಬಹುದು. ಇಂತಹ ವೈರಸ್ ನಿಂದ ನಾವು ಹೇಗೆ ದೂರ ಇರಬಹುದು ಅನ್ನೊದು ಇಂಡಿಯನ್ ಸೊಸೈಟಿ ಆಫ್ ಹೀಟಿಂಗ್‌ನವರು ಕೆಲವು ಸಲಹೆಗಳನ್ನ ನೀಡಿದ್ದಾರೆ.
ಎಸಿ ಅಳವಡಿಸಿಕೊಳ್ಳುವುದರ ಮೂಲಕವೂ ನಾವು ಕೊರೊನಾದಿಂದ ದೂರ ಇರಬಹುದು ಎನ್ನುವ ಸಲಹೆ ಕೊಟ್ಟಿದ್ದಾರೆ. ಆದ್ದರಿಂದ ಈಗ ನೀವು ಮನೆಯಲ್ಲಿ ಎಸಿ ಹಾಕಿಕೊಂಡು ಆರಾಮಾಗಿ ಇರಬಹುದಂತೆ. ಆದರೆ ನೀವು ಇಲ್ಲಿ ಎಚ್ಚರ ವಹಿಸಬೇಕಾಗಿದ್ದು ಏನಂದ್ರೆ ಟೆಂಪರೇಚರ್ ಬಗ್ಗೆ ಗಮನ ಇಡಬೇಕು. ಕೋಣೆಯ ತಾಪಮಾನ ಏನಿಲ್ಲ ಅಂದರೂ 24 ಡಿಗ್ರಿ ಸೆಲ್ಸಿಯನಸ್ ನಿಂದ 30 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಬೇಕು.
ಗಾಳಿಯಲ್ಲಿಹೆಚ್ಚು ಆರ್ದ್ರತೆ ಇದ್ದರೆ ಏಸಿಯನ್ನ 24 ಡಿಗ್ರಿಗಳಷ್ಟು ಇಡಬಹುದಾಗಿದೆ. ಕೋಣೆಯಲ್ಲಿ ಸಾಕಷ್ಟು ಪ್ರಮಾಣದ ಗಾಳಿ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನೀವು ಫ್ಯಾನ್ ಕೂಡಾ ಬಳಸಬಹುದಾಗಿದೆ. ಏನೇ ಆದರೂ ಕೋಣೆಯಲ್ಲಿ ಇರುವ ತೇವಾಂಶದ ಪ್ರಮಾಣ ಶೇಕಡಾ 40 ಕ್ಕಿಂತ ಕಡಿಮೆಯಾಗದಂತೆ ನೋಡಿಕೊಳ್ಳಿ. ಅದಕ್ಕಾಗಿ ಕೋಣೆಯಲ್ಲಿ ನೀರು ತುಂಬಿದ ಪಾತ್ರೆ ಇಟ್ಟರೆ ಒಳ್ಳೆಯದು.
ಇನ್ನೂ ಬಾಗಿಲ ಪರದೆಗಳನ್ನ ಬಳಸಿ. ಇದರಿಂದ ಒಂದು ಕೋಣೆಯಿಂದ ಇನ್ನೊಂದು ಕೋಣೆಗಳಿಗೆ ವೈರಸ್ ಬೇಗ ಹರಡಿಕೊಳ್ಳುವುದಿಲ್ಲ. ಅಲ್ಲದೇ ಕಾರಿಡಾರ್‌ನಲ್ಲಿ ಬಾಗಿಲುಗಳು ಇಲ್ಲದಿದ್ದರೆ ಅಲ್ಲಿ ಬಾಗಿಲುಗಳನ್ನ ಹಾಕಿ. ಇದರಿಂದ ಗಾಳಿಯ ಏರ್‌ಫ್ಲೋ ಕಡಿಮೆ ಆಗುತ್ತೆ. ಇನ್ನು ಛಾವಣಿಯಲ್ಲೂ ಉತ್ತಮ ಗಾಳಿಗಾಗಿ ವ್ಯವಸ್ಥೆ ಮಾಡಿದ್ದಲ್ಲಿ ಇವು ಕೂಡಾ ವೈರಸ್ ಹೇಗೆ ಬೇಕೋ ಹಾಗೆ ಹರಡದಂತೆ ರಕ್ಷಣೆ ನೀಡುತ್ತೆ. ಆದ್ದರಿಂದ ಮನೆಯಲ್ಲಿ ಹವಾ ನಿಯಂತ್ರಣದ ವ್ಯವಸ್ಥೆಯ ಜೊತೆ ಜೊತೆಗೆ ಏರ್‌ಫಿಲ್ಟರ್ ಕೂಡಾ ಅಳವಡಿಸಿಕೊಂಡರೆ ಇನ್ನೂ ಉತ್ತಮ.