alex Certify ಚರ್ಮದ ಮೇಲೆ ‘ಕೊರೊನಾ’ ಎಷ್ಟು ಸಮಯ ಇರಬಲ್ಲದು….? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಮೇಲೆ ‘ಕೊರೊನಾ’ ಎಷ್ಟು ಸಮಯ ಇರಬಲ್ಲದು….? ಇಲ್ಲಿದೆ ಮಾಹಿತಿ

ಕೊರೊನಾ ಬಗ್ಗೆ ದಿನಕ್ಕೊಂದು ಅಧ್ಯಯನ ನಡೆಯುತ್ತಿದೆ. ಈಗ ಜಪಾನ್ ನ ಕ್ಯೋಟೋ ಫ್ರಿಫೆಕ್ಚ್ರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್ ನಡೆಸಿರುವ ಅಧ್ಯಯನದಿಂದ ಕೊರೊನಾಗೆ ಸಂಬಂಧಪಟ್ಟ ಹೊಸ ವಿಚಾರ ಬೆಳಕಿಗೆ ಬಂದಿದೆ.

ಈ ವಿಶ್ವವಿದ್ಯಾನಿಲಯ ಈಗ ಹೇಳ್ತಿರುವ ವಿಚಾರ ಕೇಳಿ ಇಡೀ ವಿಶ್ವವೇ ದಂಗಾಗಿ ಹೋಗಿದೆ. ಈ ವೈರಸ್ ಏನಾದರೂ ನಮ್ಮ ಚರ್ಮಕ್ಕೆ ಅಂಟಿಕೊಂಡ್ರೆ ಹಲವಾರು ಗಂಟೆಗಳ ತನಕ ಬದುಕಿ ಇರಬಲ್ಲದಂತೆ. ಅಷ್ಟೆ ಅಲ್ಲ, ನಮ್ಮ ದೇಹದ ತಾಪಮಾನಕ್ಕೇನಾದರೂ ಈ ವೈರಸ್ ಹೊಂದಿಕೊಂಡಿದ್ದೇ ಆದರೆ ಏನಿಲ್ಲ ಅಂದರೂ 9 ಗಂಟೆಯವರೆಗೂ ಬದುಕಬಲ್ಲದಂತೆ.

ಇದೇ ಅಧ್ಯಯನದ ಪ್ರಕಾರ ಕೇವಲ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳ ದೇಹದ ಮೇಲೂ ಈ ವೈರಸ್ ಅಂಟಿಕೊಂಡು ಬದುಕಿರುತ್ತದೆಯಂತೆ. ಅದರಲ್ಲೂ ಮನುಷ್ಯನ ದೇಹದ ಮೇಲೆ ಹೆಚ್ಚು ಕಾಲದವರೆಗೆ ಬದುಕಿರುವ ಸಾಧ್ಯತೆಗಳು ಹೆಚ್ಚಿವೆ ಇನ್ಫ್ಲೂಎಂಜಾ-A ವೈರಸ್ಗಿಂತಲೂ ಹೆಚ್ಚು ಆಯಸ್ಸು ಈ ಕೊರೊನಾಗೆ ಇದೆ ಎಂದು ಅಧ್ಯಯನ ಹೇಳ್ತಿದೆ.

ಕೊರೊನಾ ವೈರಸ್ ಮತ್ತು ಇನ್ಫ್ಲೂಎಂಜಾ –ಎ ವೈರಸ್ ಎರಡರ ಬಗ್ಗೆಯೂ ಅಧ್ಯಯನ ನಡೆದಿದೆ. ಅಧ್ಯಯನದಲ್ಲಿ ಸ್ಪಷ್ಟವಾಗಿ ಗೊತ್ತಾಗಿರೋದೇನೆಂದರೆ ಕೊರೊನಾ ವೈರಸ್ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕೆ ಮನುಷ್ಯರಲ್ಲಿ ಕೊರೊನಾ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...