ಸಣ್ಣ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಿದೆಯೇ…? ಇದನ್ನು ಸರಿಮಾಡಲು ನೆಲ್ಲಿಕಾಯಿಗಿಂತ ಅತ್ಯುತ್ತಮವಾದ ಮದ್ದು ಮತ್ತೊಂದಿಲ್ಲ. ಕೂದಲನ್ನು ಕಪ್ಪಾಗಿಸುವ ಗುಣ ಹೊಂದಿರುವ ನೆಲ್ಲಿಕಾಯಿಯನ್ನು ಹೇರ್ ಡೈಗಳಲ್ಲೂ ಬಳಸುತ್ತಾರೆ.
ತೆಂಗಿನೆಣ್ಣೆ ಬಿಸಿ ಮಾಡಿ ಅದಕ್ಕೆ ಒಂದು ಚಮಚ ಮೆಂತೆ ಪುಡಿ ಮತ್ತು ಎರಡು ಚಮಚ ನೆಲ್ಲಿಕಾಯಿ ಪುಡಿ ಸೇರಿಸಿ. ತಣ್ಣಗಾದ ಬಳಿಕ ಮಿಶ್ರಣವನ್ನು ನೆತ್ತಿಯ ಮೇಲೆ ಹಾಗು ಕೂದಲಿಗೆ ತಿಕ್ಕಿ ಮಲಗಿ. ಮರುದಿನ ಬೆಳಗ್ಗೆ ಸ್ನಾನ ಮಾಡಿ. ವಾರಕ್ಕೊಮ್ಮೆ ಹೀಗೆ ಮಾಡುವುದರಿಂದ ಕೂದಲೂ ಕಪ್ಪಾಗುತ್ತದೆ. ದಪ್ಪವಾಗಿಯೂ ಬೆಳೆಯುತ್ತದೆ.
ನೆಲ್ಲಿಕಾಯಿಯನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಬಳಸುವುದು ಅತ್ಯುತ್ತಮ ವಿಧಾನ. ಇದರ ಹೊರತಾಗಿ ನೆಲ್ಲಿಕಾಯಿ ಪುಡಿ ಮಾರುಕಟ್ಟೆಯಲ್ಲೂ ಲಭ್ಯವಿದೆ. ಉತ್ತಮ ಗುಣಮಟ್ಟದ ಪುಡಿ ಬೇಕಿದ್ದರೆ ಮನೆಯಲ್ಲೇ ತಯಾರಿಸಿ. ಇದು ಬಿಳಿಕೂದಲ ಸಮಸ್ಯೆಯನ್ನು ಬಹುಬೇಗ ನಿವಾರಿಸುತ್ತದೆ.
ನೆಲ್ಲಿಕಾಯಿ ಪುಡಿಗೆ ಲಿಂಬೆ ರಸ, ಬಾದಾಮಿ ಎಣ್ಣೆ ಸೇರಿಸಿ ಪೇಸ್ಟ್ ತಯಾರಿಸಿ. ಕೂದಲಿಗೆ ಹಚ್ಚಿ. ಒಂದು ಗಂಟೆ ಬಳಿಕ ತೊಳೆದು ನೋಡಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ಸಾಕು ನಿಮ್ಮ ಕೂದಲು ಕಪ್ಪಗೆ ಹೊಳೆಯುವುದು ಖಚಿತ.
ನೆಲ್ಲಿಕಾಯಿ ಪುಡಿಯೊಂದಿಗೆ ತೆಂಗಿನೆಣ್ಣೆ ಮತ್ತು ಕರಿಬೇವಿನ ಎಲೆಯ ಪುಡಿಯೂ ಅತ್ಯುತ್ತಮ ಪರಿಣಾಮ ಬೀರಬಲ್ಲದು. ಇದು ಕೂದಲು ಸೊಂಪಾಗಿ ಬೆಳೆಯಲೂ ಸಹಕರಿಸುತ್ತದೆ. ಹೊಟ್ಟಿನ ಸಮಸ್ಯೆಯನ್ನೂ ದೂರ ಮಾಡುತ್ತದೆ.