ತನ್ನ ನೀಲಿ ಕಣ್ಣುಗಳಿಂದ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಪಾಕಿಸ್ತಾನದ ಚಾಯ್‌ವಾಲಾ ಅರ್ಶದ್ ಖಾನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ತಮ್ಮದೇ ಮಾಲೀಕತ್ವದಲ್ಲಿ ರೂಫ್-ಟಾಪ್ ಕೆಫೆಯೊಂದಕ್ಕೆ ಚಾಲನೆ ಕೊಟ್ಟಿದ್ದಾರೆ ಅರ್ಶದ್.
ಕೆಫೆ ಚಾಯ್ ವಾಲಾ ಹೆಸರಿನಲ್ಲಿ ಈ ಕೆಫೆ ಆರಂಭಗೊಂಡಿದೆ. ತನ್ನ ಅಡ್ಡ ಹೆಸರಾದ ಚಾಯ್‌ವಾಲಾ ಹೆಸರಿನಲ್ಲೇ ಕೆಫೆ ಆರಂಭಿಸಿರುವ ಈತ, ಪಾಕಿಸ್ತಾನದ ಪ್ರಖ್ಯಾತ ಟ್ರಕ್ ಕಲೆ, ಸ್ಟ್ರಾ ಟೇಬಲ್‌ಗಳು, ಉರ್ದು ಲಿಪಿಗಳು, ಕುರ್ಚಿಗಳು ಸೇರಿದಂತೆ ಅನೇಕ ರೀತಿಯ ಸಿಂಗಾರಗಳಿಂದ ತಮ್ಮ ಕೆಫೆಯನ್ನು ಅಲಂಕರಿಸಿದ್ದಾರೆ.
ಚಹಾದೊಂದಿಗೆ ಈತ 15 ವಿವಿಧ ತಿನಿಸುಗಳನ್ನು ಸರ್ವ್ ಮಾಡುತ್ತಾರೆ. ಖಾನ್‌ರ ಈ ಹೊಸ ಬ್ಯುಸಿನೆಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.