ಅಹಮದಾಬಾದ್: ಗುಜರಾತ್ ನ ಬನಾಸ್ಕಾಂತ ಜಿಲ್ಲೆಯ ಸಂತಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಿಯಕರನೊಂದಿಗೆ ಸೇರಿದ ಮಹಿಳೆ ತನ್ನ ಪುತ್ರನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
ಮೆಹಮ್ಮದ್ ಪುರ ಗ್ರಾಮದಲ್ಲಿ ಆರು ವರ್ಷದ ಮಗನನ್ನು 26 ವರ್ಷದ ಮಹಿಳೆ ಕೊಲೆ ಮಾಡಿದ್ದಾಳೆ. ಹೊಲದಲ್ಲಿ ಪ್ರಿಯಕರನೊಂದಿಗೆ ಸರಸವಾಡುತ್ತಿದ್ದ ವೇಳೆಯಲ್ಲೇ ಪುತ್ರ ನೋಡಿದ್ದ. ಮಗ ತನ್ನ ಗಂಡನಿಗೆ ವಿಷಯ ತಿಳಿಸುವ ಭಯದಲ್ಲಿ ಪ್ರಿಯಕರನೊಂದಿಗೆ ಸೇರಿ ಪುತ್ರನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆ ಪ್ರಿಯಕರನೊಂದಿಗೆ ಹೊಲದಲ್ಲಿ ಸರಸವಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ಆರು ವರ್ಷದ ಮಗ ನೋಡಿದ್ದಾನೆ. ಮಹಿಳೆ ಹಾಗೂ ಆಕೆಯ ಪ್ರಿಯಕರ ಬಾಲಕನಿಗೆ ಯಾರಿಗೂ ವಿಷಯ ತಿಳಿಸದಂತೆ ಬೆದರಿಸಿದ್ದಾರೆ.
ಆದರೆ ಬಾಲಕ ತನ್ನ ತಂದೆಗೆ ತಾಯಿಯ ಅಕ್ರಮ ಸಂಬಂಧದ ವಿಷಯವನ್ನು ತಿಳಿಸಿದ್ದಾನೆ. ಮರುದಿನ ಆತ ನಾಪತ್ತೆಯಾಗಿದ್ದು ಪೊಲೀಸರಿಗೆ ದೂರು ನೀಡಲಾಗಿದೆ. ಹುಡುಕಾಟದ ನಂತರ ನಾಪತ್ತೆಯಾಗಿದ್ದ ಬಾಲಕನ ರಕ್ತಸಿಕ್ತ ಮೃತದೇಹ ಹೊಲದಲ್ಲಿ ಕಂಡು ಬಂದಿದೆ. ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಹಿಂದೆಯೇ ತಿಳಿದಿತ್ತು. ಬಾಲಕ ನಾಪತ್ತೆಯಾಗಿದ್ದರಿಂದ ದೂರು ನೀಡಲಾಗಿತ್ತು ಎಂದು ಮಹಿಳೆಯ ಪತಿ ತಿಳಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರ ಕೋವಿಡ್ ಪರೀಕ್ಷೆ ವರದಿ ಬಂದ ನಂತರ ಔಪಚಾರಿಕವಾಗಿ ಬಂಧಿಸಲಾಗುವುದು ಎಂದು ಹೇಳಲಾಗಿದೆ.