ರೈತರಿಗೆ ಸಹಾಯ ಮಾಡಲು ಮೋದಿ ಸರ್ಕಾರ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯವನ್ನು ದ್ವಿಗುಣಗೊಳಿಸಿದೆ. ಈ ಯೋಜನೆಯಡಿ ಪ್ರತಿ ವರ್ಷ 6,000 ರೂಪಾಯಿಗಳನ್ನು ನೀಡಲಾಗುತ್ತದೆ.
ಸರ್ಕಾರದ ಈ ಯೋಜನೆ ರೈತರಿಗೆ ನೇರ ನಗದು ವರ್ಗಾವಣೆಯ ಯೋಜನೆಯಾಗಿದೆ. ಈ ಯೋಜನೆಯಡಿ ರೈತರಿಗೆ ವರ್ಷವಿಡೀ ಮೂರು ಕಂತುಗಳಲ್ಲಿ 6000 ರೂಪಾಯಿ ಸಿಗುತ್ತದೆ. ಪ್ರತಿ ಕಂತಿನಲ್ಲಿ 2,000 ರೂಪಾಯಿ ನೀಡಲಾಗುತ್ತದೆ.
ಸರ್ಕಾರ ಈವರೆಗೆ 6 ಕಂತುಗಳನ್ನು ಬಿಡುಗಡೆ ಮಾಡಿದೆ. ಇದರ ಏಳನೇ ಕಂತು ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈ ಯೋಜನೆ ಲಾಭವನ್ನು 14 ಸಾವಿರ ಕೋಟಿ ರೈತರು ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಹಣ ಸಿಗದ ರೈತರು ಅದ್ರ ಬಗ್ಗೆ ಮಾಹಿತಿ ಕಲೆ ಹಾಕಲು ಅಲ್ಲಿ ಇಲ್ಲಿ ಅಲೆಯುತ್ತಾರೆ. ಆದ್ರೆ ರೈತರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ, ಕಿಸಾನ್ ಸಮ್ಮಾನ್ ಯೋಜನೆ ಪೋರ್ಟಲ್ ನಲ್ಲಿ ಹೆಲ್ಪ್ ಡೆಸ್ಕ್ ಶುರು ಮಾಡಿದೆ.
ಹೆಲ್ಪ್ ಡೆಸ್ಕ್ ರೈತರಿಗೆ ಸಹಾಯ ಮಾಡಲಿದೆ. ಆಧಾರ್ ಕಾರ್ಡ್, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತ್ರ ನಿಮಗೆ ನಿಮ್ಮ ಹಣ ಯಾಕೆ ಸಿಗ್ತಿಲ್ಲ ಎಂಬುದು ಗೊತ್ತಾಗುತ್ತದೆ. ನಿಮ್ಮ ಖಾತೆ, ಸಂಖ್ಯೆ ಅಥವಾ ಹೆಸರಿನಲ್ಲಿ ತಪ್ಪಿದ್ದರೆ ಅದನ್ನು ಇದ್ರ ಮೂಲಕವೇ ಸರಿಪಡಿಸಬಹುದು. ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗದೆ ನೀವು ಮನೆಯಲ್ಲಿಯೇ ಕುಳಿತು ಕೆಲಸ ಮುಗಿಸಬಹುದು.